ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರು

Update: 2019-01-27 15:23 GMT

ಬೆಂಗಳೂರು, ಜ.27: ವಸಂತಪುರ ವಾರ್ಡ್‌ನ ಬಿಕಾಸಿಪುರ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬಡಾವಣೆಗೆ ರೆಬೆಲ್ ಸ್ಟಾರ್ ಅಂಬರೀಶ್ ಬಡಾವಣೆ ಎಂದು ಬಿಬಿಎಂಪಿ ಸರ್ವಾನುಮತದಿಂದ ನಾಮಕರಣ ಮಾಡಿದೆ.

ಬಿಕಾಸಿಪುರ ಗ್ರಾಮದಲ್ಲಿನ ಬಿಡಿಎ ಬಡಾವಣೆಗೆ ಯಾವುದೇ ಹೆಸರು ಇಲ್ಲದಿರುವುದರಿಂದ ರೆಬೆಲ್ ಸ್ಟಾರ್ ಅಂಬರೀಶ್ ಬಡಾವಣೆ ಎಂದು ನಾಮಕರಣ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯೆ ಶೋಭಾಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರ ಗೌರವಾರ್ಥ ಅವರ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷದ ಡಿ. 27 ರಂದು ನಡೆದ ಮಾಸಿಕ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ನಿರ್ಣಯವನ್ನು ಮಂಡಿಸಿದ್ದರು. ಇದಕ್ಕೆ ಕಾಂಗ್ರೆಸ್‌ನ ಆರ್.ಎಸ್ ಸತ್ಯನಾರಾಯಣ ಅನುಮೋದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News