ಪ್ರಧಾನಿ ಮೋದಿಗೆ 17 ರೂ. ಡಿಡಿ ಕಳುಹಿಸಿದ ಕಾಂಗ್ರೆಸ್ ನಾಯಕ!

Update: 2019-02-01 14:55 GMT

ಬೆಂಗಳೂರು, ಫೆ.1: ಕೇಂದ್ರ ಸರಕಾರ ಪ್ರಸ್ತುತ ಸಾಲಿನಲ್ಲಿ ಮಂಡಿಸಿರುವ ಮಧ್ಯಂತರ ಬಜೆಟ್ ದೇಶದ ರೈತರಿಗೆ ನಿರಾಶದಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಪ್ರಧಾನಿ ನರೇಂದ್ರ ಮೋದಿಗೆ 17 ರೂ. ಡಿಡಿ ಕಳುಹಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿದ ಅವರು, ಬಜೆಟ್‌ ನಲ್ಲಿ ರೈತರಿಗೆ ದಿನಕ್ಕೆ 17 ರೂಪಾಯಿಯಂತೆ, ವರ್ಷಕ್ಕೆ 6 ಸಾವಿರ ರೂ. ಅನುದಾನ ಮೀಸಲಿಟ್ಟಿರುವುದು ಖಂಡನೀಯ. ಹೀಗಾಗಿಯೇ, ಪ್ರಧಾನಿ ಮೋದಿಗೆ 17 ರೂ. ಡಿಡಿ ಕಳುಹಿಸಲಾಗಿದೆ ಎಂದು ತಿಳಿಸಿದರು.

2014ರಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಆದಾಯ ದ್ವಿಗುಣ, ರೈತರ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಅನುಷ್ಠಾನಕ್ಕೆ ತರುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ, ಚುನಾವಣೆ ಸಂದರ್ಭದಲ್ಲಿ ರೈತರಿಗೆ ಹಣದ ಆಮಿಷ ಒಡ್ಡುವ ಕಾರ್ಯಕ್ಕೆ ಮುಂದಾಗಿದೆ ಎಂದು  ಅವರು ಟೀಕಿಸಿದರು.

ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದ ಅವರು, ಪ್ರಧಾನ ಮಂತ್ರಿ ವಿಮ ಯೋಜನೆಯಲ್ಲಿ ರೈತರಿಂದ ಲೂಟಿ ಹೊಡೆದ ಸುಮಾರು 1 ಲಕ್ಷ ಕೋಟಿ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ರವಾನಿಸಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News