ಲೆಕ್ಕತಪ್ಪಿದ ಚಿತ್ರಗುಪ್ತ ಹಾಗೂ ಮೌನಗೀತಾ ಪುಸ್ತಕ ಬಿಡುಗಡೆ ಸಮಾರಂಭ

Update: 2019-02-04 16:56 GMT

ಭಟ್ಕಳ, ಫೆ. 4: ಓದುವ ಹವ್ಯಾಸ, ಅನುಭವಗಳನ್ನು ಚೆನ್ನಾಗಿ ನಿರೂಪಿಸುವ ಕಲೆಯನ್ನು ಮೈಗೂಡಿಸಿಕೊಂಡ ಗೀತಾ ಭಟ್ಟ ಈಕೆಯು ಮುಂದೆ ಓರ್ವ ಉತ್ತಮ ಸಾಹಿತಿಯಾಗಿ ಹೊರ ಹೊಮ್ಮಲಿ ಎಂದು ಹಿರಿಯ ಸಾಹಿತಿ ಉಡುಪಿಯ ಕು.ಗೋ. ಗೋಪಾಲ ಭಟ್ಟ ಅವರು ಹೇಳಿದರು. 

ಅವರು ಇಲ್ಲಿನ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಗೀತಾ ಎಸ್. ಭಟ್ಟ (ಸತಿಗೀತಾ) ಅವರ ಲೆಕ್ಕತಪ್ಪಿದ ಚಿತ್ರಗುಪ್ತ ಹಾಗೂ ಮೌನಗೀತಾ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ, ಕವಿ ರಾಮಮೂರ್ತಿ ನಾಯಕ ಅವರು ಗೀತಾ ಭಟ್ಟ ಈಕೆಯು ವಿದ್ಯಾರ್ಥಿಯಗಿದ್ದಾಗಲೇ ತನ್ನ ಕವಿತ್ವವನ್ನು ಹೊರ ಹಾಕುತ್ತಿದ್ದಳು. ಓರ್ವ ಶಿಷ್ಯೆ ಇಂದು ಗುರುವಿಗೆ ಕೊಟ್ಟ ಉಡುಗೊರೆ ಎರಡು ಪುಸ್ತಕಗಳು, ಇದಕ್ಕಿಂತ ಹೆಚ್ಚು ತನ್ನ ವಿದ್ಯಾರ್ಥಿಯಿಂದ ಯಾವ ಶಿಕ್ಷಕರೂ ಬಯಸಲಾರ ಎಂದು ಮನತುಂಬಿ ಮಾತನಾಡಿದರು. 

ಮೌನಗೀತ ಪುಸ್ತಕವನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಮಂಗಳೂರಿನ ನ್ಯಾಯವಾದಿ ಎಂ.ಪಿ. ದಾಮೋದರ ಅವರು ಕನ್ನಡವನ್ನು, ಕನ್ನಡ ನಾಡನ್ನು, ಕನ್ನಡದ ಖ್ಯಾತಿಯನ್ನು ಕನ್ನಡದ ಕವಿಗಳನ್ನು ಬೆಂಬಲಿಸಿ ಆ ಮೂಲಕ ಕನ್ನಡ ಸೇವೆಗೆ ಮುಂದಾಗಿ ಎಂದು ಕರೆ ನೀಡಿದರು. 

ಲೆಕ್ಕತಪ್ಪಿದ ಚಿತ್ರಗುಪ್ತ ಪುಸ್ತಕವನ್ನು ಬಿಡುಗಡೆಗೊಳಿಸಿದ ಸಾಹಿತಿ ತಿಗಣೇಶ ಮಾಗೋಡು, ಮುಖ್ಯ ಅತಿಥಿಗಳಾದ ಸಾಹಿತಿ ಡಾ. ಆರ್. ವಿ. ಸರಾಫ್, ನಾಗರೀಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿದರು. 
ದೂರದ ಕೊಪ್ಪಳದಿಂದ ಬಂದ ಗಣಪತಿ ಹೆಗಡೆ, ಬೆಂಗಳೂರಿನ ಸುಕನ್ಯಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

ಶಿಕ್ಷಕ ಜಿ.ಟಿ. ಭಟ್ಟ ಸ್ವಾಗತಿಸಿದರು. ಸಾಹಿತಿ ಶ್ರೀಧರ ಶೇಟ್ ಪುಸ್ತಕ ಪರಿಚಯ ಮಾಡಿದರು. ಸಾಹಿತಿ ಗೀತಾ ಭಟ್ಟ ತನ್ನ ಅನುಭವಗಳನ್ನು ವ್ಯಕ್ತಪಡಿಸುತ್ತಾ ಸಹಕರಿಸಿದವರನ್ನು ಸ್ಮರಿಸಿದರು. ಶಿಕ್ಷಕಿ ಮಂಜೂಳಾ ಶಿರೂರ್‍ಕರ್ ನಿರ್ವಹಿಸಿದರು. ಎಂ.ಜಿ.ಹೆಗಡೆ ವಂದಿಸಿದರು. ಇದೇ ಸಂದರ್ಭದಲ್ಲಿ ಗೀತಾ ಭಟ್ಟ ಮತ್ತು ಸತೀಶ ಭಟ್ಟ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News