ಅಮಿತ್ ಶಾ ಆಪ್ತ ರಾಮ್‌ಲಾಲ್ ಆಗಮನ: ಫೆ.5 ರಂದು ಬಿಜೆಪಿ ಕೋರ್ ಕಮಿಟಿ ಸಭೆ

Update: 2019-02-04 17:04 GMT

ಬೆಂಗಳೂರು, ಫೆ.4: ಬಿಜೆಪಿಯ ಮಹತ್ವದ ಕೋರ್ ಕಮಿಟಿ ಸಭೆ ಫೆ.5 ರಂದು ನಡೆಯಲಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್ ನಗರಕ್ಕೆ ಆಗಮಿಸುತ್ತಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ಆಪ್ತ ರಾಮ್‌ಲಾಲ್ ಆಗಮದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ತಯಾರಿ ಮತ್ತಷ್ಟು ಚುರುಕುಗೊಳ್ಳಲಿದೆ ಎನ್ನಲಾಗುತ್ತಿದೆ.

ಫೆ.5 ರಂದು ಮಲ್ಲೇಶ್ವರದಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಹಲವಾರು ಮಹತ್ವದ ವಿಷಯಗಳು ಚರ್ಚೆಯಾಗಲಿವೆ. ಅದರ ಜತೆಗೆ, ದೋಸ್ತಿ ಸರಕಾರಕ್ಕೆ ಪೆಟ್ಟು ನೀಡಲು ಅಗತ್ಯದ ದಾರಿಗಳ ಕುರಿತು ಚರ್ಚೆಯಾಗಲಿದೆ. ಇನ್ನು ಅತೃಪ್ತ ಶಾಸಕರನ್ನು ಬಲೆಗೆ ಹಾಕಿಕೊಳ್ಳುವುದು, ದೋಸ್ತಿ ಸರಕಾರದ ವೈಫಲ್ಯಗಳನ್ನು ಜನರ ಮುಂದಿಡುವುದು ಸೇರಿದಂತೆ ಮತ್ತಿತರೆ ಮಹತ್ವ ಅಂಶಗಳು ಚರ್ಚೆಯಾಗಲಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News