ಮಂಗಳೂರು , ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕಗಳ ನಿರ್ಮಾಣ

Update: 2019-02-08 09:28 GMT

ಬೆಂಗಳೂರು, ಫೆ.8: ಮಂಗಳೂರು , ತುಮಕೂರು , ಚಿತ್ರದುರ್ಗ, ಹಾವೇರಿ, ಕೋಲಾರ ಸೇರಿದಂತೆ 10 ಜಿಲ್ಲೆಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.

►ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಹೊರವರ್ತುಲ ರಸ್ತೆ ನಿರ್ಮಿಸಲು 16, 579 ಕೋಟಿ ರೂ.

►ಮೆಟ್ರೋ ಹಾಗೂ ಬಸ್ ಪ್ರಯಾಣಕ್ಕೆ ಏಕರೂಪದ ಪಾಸ್ ವ್ಯವಸ್ಥೆ

►10 ಮೆಟ್ರೋ ನಿಲ್ದಾಣಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಚಾರ್ಜಿಂಗ್ ವ್ಯವಸ್ಥೆ

►ಸವಿತಾ ಸಮಾಜದ ಅಭಿವೃದ್ಧಿಗೆ ನಿಗಮ .

►ಅಲೆಮಾರಿ ಜನಾಂಗದ ಅಭಿವೃದ್ಧಿಗೆ 25 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ

►ಹೊಸ ತಾಲೂಕುಗಳು: ಹಾರೋಹಳ್ಳಿ, ಚೇಳೂರು, ಕಳಸ, ತೆರದಾಳ

►ಮಹಾನಗರಪಾಲಿಕೆಗಳ ಅಭಿವೃದ್ಧಿಗೆ 1,325 ಕೋಟಿ ರೂ.

►ಚಿಕ್ಕಮಗಳೂರಿನಲ್ಲಿ ಬಾಲಕಿಯರಿಗೆ ಬಾಲ ಮಂದಿರ.

►ಅಂಗನವಾಡಿ  ಕಾರ್ಯಕರ್ತೆಯರ ಗೌರವಧನ 500 ರೂ. ಮಾಸಿಕ ಹೆಚ್ಚಳ.

►ನೋಂದಣಿ , ಮುದ್ರಾಂಕ ಇಲಾಖೆಗೆ 11,828 ಕೋಟಿ ರೂ.

►ಮಂಗಳೂರು , ತುಮಕೂರು , ಚಿತ್ರದುರ್ಗ, ಹಾವೇರಿ, ಕೋಲಾರ ಸೇರಿದಂತೆ 10 ಜಿಲ್ಲೆಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕಗಳ ನಿರ್ಮಾಣ

►ಸಿದ್ದಗಂಗಾ ಶ್ರೀಗಳ ಹುಟ್ಟೂರ ಅಭಿವೃದ್ಧಿಗೆ 25 ಕೋಟಿ ರೂ.

►ಸಾರಥಿ  ಸೂರು ವಸತಿ ಯೋಜನೆಗೆ 50 ಕೋಟಿ ರೂ.

►20 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ.

►ಅಂಕಪಟ್ಟಿಗಳ ಡಿಜಿಟಲೀಕರಣಕ್ಕೆ 1 ಕೋಟಿ ರೂ. ಅನುದಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News