ಪರಮೇಶ್ವರ ಭಟ್ಟ ಸಮಗ್ರ ಸಂಪುಟಗಳ ಲೋಕಾರ್ಪಣೆ

Update: 2019-02-10 16:38 GMT

ಮಂಗಳೂರು, ಫೆ.10: ಎಸ್ .ವಿ.ಪರಮೇಶ್ವರ ಭಟ್ಟರು  ಕನ್ನಡ ನಾಟಕ ಹಾಗೂ ಸಾಹಿತ್ಯ ಕ್ಷೇತ್ರ ವನ್ನು ಶ್ರೀಮಂತಗೊಳಿಸಿದ ಸಾಹಿತಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಪ್ರೊ.ಎಸ್. ವಿ.ಪರಮೇಶ್ವರ ಭಟ್ಟ ಶತಮಾನೋತ್ಸವ ಸಮಿತಿ ಮಂಗಳೂರು ಮತ್ತು ಸಂತ ಅಲೋಶಿಯಸ್ ಕಾಲೇಜಿನ ವತಿಯಿಂದ ನಗರದ ಸಂತ ಅಲೋಶಿಯಸ್  ಕಾಲೇಜಿನಲ್ಲಿ ಹಮ್ಮಿ ಕೊಂಡ ಕಾರ್ಯಕ್ರಮ ದಲ್ಲಿ ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಸಂಸ್ಕೃತ ನಾಟಕಗಳನ್ನು, ಇಂಗ್ಲಿಷ್ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಎಸ್.ವಿ.ಪರಮೇಶ್ವರ ಭಟ್ಟ ರು ಕನ್ನಡ ಸಾಹಿತ್ಯಕ್ಕೆ ದೊಡ್ಡ ನಿಧಿಯನ್ನು ನೀಡಿದಂತಾಗಿದೆ.ಭಾರತ ರಂಗಭೂಮಿಯ ನ್ನು  ನಮಗೆ ಪರಿಚಯ ಮಾಡಿಸಿದ ಎಸ್ವಿಪಿ ಯವರು ಮಹಾನ್ ಜ್ಞಾನಿಯಾಗಿದ್ದರು.ಆ ಕಾರಣದಿಂದ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಡಾ.ಕಂಬಾರ  ತಿಳಿಸಿದ್ದಾರೆ.

ಸಮಾರಂಭ‌ ದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಪುಸ್ತಕ ಪ್ರಾಧಿಕಾರ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ.ಈ ಸಂದರ್ಭದಲ್ಲಿ ಪ್ರಾಧಿಕಾರ ಯುವಲೇಖಕರ 50 ಪುಸ್ತಕ ಗಳನ್ನು ಪ್ರಕಟಿಸಲು ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.

ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇ ಕ ರೈ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,ಎಸ್ ವಿ ಪಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಯಾಗುವ ಮೊದಲು ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ದ ಸ್ನಾತಕೋತ್ತರ ಕೇಂದ್ರ ವನ್ನು ಆರಂಭಿಸಿ ಅದರ ಮುಖ್ಯ ಸ್ಥರಾಗಿ ಕಾರ್ಯನಿರ್ವಹಿಸಿದವರು.ಅವರು ಜಿಲ್ಲೆಯಲ್ಲಿ ಕನ್ನಡದ ಬಗ್ಗೆ ಅಧ್ಯಯನದ ಬಗ್ಗೆ ಆಸಕ್ತಿ ಮೂಡಿಸಿದವರು. ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳ ರಚನೆಯಲ್ಲಿ ತೊಡಗಿ ಕೊಡುಗೆ ನೀಡಿದವರು ಇವುಗಳನ್ನು ಮುಂದಿನ ತಲೆಮಾರಿಗೂ ತಿಳಿಸುವ ನಿಟ್ಟಿನಲ್ಲಿ ಎಸ್ವಿಪಿಯವರ ಸಮಗ್ರ ಕ್ರತಿಗಳ ಸಂಪುಟವನ್ನು ರಚಿಸುವ ತೀರ್ಮಾನವನ್ನು ಮಾಡಲಾಗಿತ್ತು ಅದು ಈಗ ಸಾಕಾರ ಗೊಂಡಿದೆ ಎಂದರು. ಅತಿಥಿಗಳಾಗಿ ಸಂಪುಟಗಳ‌ ಸಂಪಾದಕರಾದ ಡಾ.ಏರ್ಯ ಲಕ್ಷ್ಮೀನಾರಾಯಣ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News