ವೈಮಾನಿಕ ಪ್ರದರ್ಶನ: ಬಿಎಂಟಿಸಿ ವಿಶೇಷ ಸಾರಿಗೆ ಸೌಲಭ್ಯ

Update: 2019-02-19 16:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.19: ನಗರದ ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ತೆರಳಲು ಬಿಎಂಟಿಸಿಯಿಂದ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.

ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಪ್ರತಿಬಾರಿಯೂ ವಿಶೇಷ ಸಾರಿಗೆ ಸೌಲಭ್ಯ ನೀಡುವಂತೆ ಈ ಬಾರಿಯೂ ಕಲ್ಪಿಸಲಾಗಿದ್ದು, ಪ್ರದರ್ಶನದ ಸಂದರ್ಭದಲ್ಲಿ ನಗರದ ವಿವಿಧ ಭಾಗಗಳಿಂದ ಪ್ರದರ್ಶನದ ಸ್ಥಳಕ್ಕೆ ಬಸ್ಸುಗಳು ಸಂಚಾರ ಮಾಡಲಿವೆ.

ನಗರದ ಕೆಂಪೇಗೌಡ ಬಸ್ ನಿಲ್ದಾಣ, ಎಂಜಿ ರಸ್ತೆ ಮೆಟ್ರೋ ನಿಲ್ದಾಣ, ಎಚ್‌ಎಸ್‌ಆರ್ ಬಡಾವಣೆ, ಎಚ್‌ಎಎಲ್ ಕಲ್ಯಾಣ ಮಂಟಪ, ಹೆಬ್ಬಾಳ ರಿಂಗ್ ರಸ್ತೆ ಜಂಕ್ಷನ್, ಯಲಹಂಕ (ಎನ್‌ಇಎಸ್), ಬನಶಂಕರಿ ಟಿಟಿಎಂಸಿ, ಕೆಂಗೇರಿ, ಟಿನ್ ಫ್ಯಾಕ್ಟರಿ, ಪೀಣ್ಯ 2 ನೆ ಹಂತ, ಯಶವಂತಪುರ, ಹೆಬ್ಬಾಳ, ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಬಸ್‌ಗಳು ಸಂಚಾರ ಮಾಡುತ್ತವೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News