ಫೆ. 24ರಂದು ದೈವಾರಾಧಕರ ಸಮಾಲೋಚನಾ ಸಮಾವೇಶ
ಬಂಟ್ವಾಳ, ಫೆ. 20: ದೈವಾರಾಧಕರ ಸಮಾಲೋಚನಾ ಸಮಾವೇಶವು ಫೆ. 24ರಂದು ಬೆಳಿಗ್ಗೆ 10ಗಂಟೆಗೆ ಬಂಟ್ವಾಳ ತಾಲೂಕಿನ ಏರ್ಯ ಬೀಡಿನಲ್ಲಿ ನಡೆಯಲಿದೆ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ತಿಳಿಸಿದ್ದಾರೆ.
ಅವರು ಬುಧವಾರ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೈವಾರಾಧನೆಗೆ ಸಂಬಂಧಿಸಿದಂತೆ ನೀತಿ ಸಂಹಿತೆಯ ಕುರಿತಾಗಿ ಚರ್ಚಿಸಿ ಸಮಾನ ನಿರ್ಧಾರವೊಂದಕ್ಕೆ ಬರಲು ಕಾಸರಗೋಡಿನಿಂದ ಕುಂದಾಪುರವರೆಗಿನ ಗುತ್ತಿನವರಿಂದ ಹಿಡಿದು ಕಟ್ಟುವವರವರೆಗಿನ ಎಲ್ಲ ದೈವಾರಾಧಕರ ಪ್ರಾತಿನಿಧಿಕವಾದ ಸಮಾಲೋಚನಾ ಸಮಾವೇಶ ಇದಾಗಿದೆ ಎಂದರು.
ಅರುವ ಅರಸ ಡಾ.ಪದ್ಮರಾಜ ಅಜಿಲರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಬಿ.ಎ.ವಿವೇಕ ದಿಕ್ಸೂಚಿ ಭಾಷಣ ಮಾಡುವರು. ಅಂದು ಸಂಜೆ ನಡೆಯುವ ಸಮಾರೋಪದಲ್ಲಿ ಜ್ಞಾನಪದ ತಜ್ಞ ಡಾ.ವೈ.ಎನ್.ಶೆಟ್ಟಿ ಅವರು ಭಾಗವಹಿಸುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾಬಲೇಶ್ವರ ಹೆಬ್ಬಾರ್, ಚಂದ್ರಹಾಸ ಶೆಟ್ಟಿ ರಂಗೋಲಿ ಹಾಜರಿದ್ದರು.