‘ಕೈಮಗ್ಗದ ವಸ್ತ್ರ ಬಳಸಿ, ನೇಕಾರಿಕೆ ಉಳಿಸಿ’ ವಾಕಥಾನ್

Update: 2019-02-24 15:34 GMT

ಬೆಂಗಳೂರು, ಫೆ.24: ಕೈಮಗ್ಗದ ವಸ್ತ್ರಗಳನ್ನು ಬಳಸಿ, ನೇಕಾರಿಕೆಯನ್ನು ಉಳಿಸಿ, ಬೆಳೆಸಿ ಎನ್ನುವ ಘೋಷವಾಕ್ಯದಡಿ ಅಖಿಲ ಭಾರತ ಕುರುಹೀನ ಶೆಟ್ಟಿ ಮಹಿಳಾ ಸಮಾಜ ನೇಕಾರರ ರಾಜ್ಯಮಟ್ಟದ ಬೃಹತ್ ಜಾಗೃತಿ ವಾಕಥಾನ್ ನಡೆಸಲಾಯಿತು.

ಆಧುಮಿಕ ಮತ್ತು ಬಹುರಾಷ್ಟ್ರೀಯ ಪರವಾದ ನೀತಿಗಳಿಂದ ಕೈಮಗ್ಗ ಮತ್ತು ನೇಕಾರಿಕೆ ಸಂಕಷ್ಟದಲ್ಲಿದ್ದು, ಘೋಷಣೆಯಾಗಿರುವ ನೇಕಾರರ ಸಮಗ್ರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ವಾಕಥಾನ್ ಪಾಲ್ಗೊಂಡಿದ್ದವರು ಒತ್ತಾಯಿಸಿ ಸರಕಾರದ ಗಮನ ಸೆಳೆದರು.

ನೇಕಾರರ ಕಸುಬು ಉಳಿಸಲು ಅವಿರತವಾಗಿ ಹೋರಾಟ ಮಾಡುತ್ತಿರುವ ಹಿರಿಯ ರಂಗಕರ್ಮಿ ಪ್ರಸನ್ನ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. 'ನೇಕಾರಿಕೆ ಯಾವುದೇ ಒಂದು ಜಾತಿ, ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ತಳವರ್ಗದ ಅಸಂಖ್ಯಾತ ಜನ ನೇಕಾರಿಕೆಯನ್ನು ಅವಲಂಬಿಸಿದ್ದಾರೆ. ಅವರೆಲ್ಲರ ಬದುಕು ಹಸನಾಗಲು ಈ ಹೋರಾಟ ನಾಂದಿಯಾಗಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News