ಜನರಲ್ಲಿ ಐಕ್ಯತೆ-ಸಹಿಷ್ಣುತೆಯ ಭಾವನೆ ಮೂಡಿಸಬೇಕು: ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಕೆ.ಎನ್.ಅಶ್ವಿನಿ

Update: 2019-03-02 16:05 GMT

ಬೆಂಗಳೂರು, ಮಾ.2: ದೇಶದ ಐಕ್ಯತೆ ಮತ್ತು ಸಹಿಷ್ಣುತೆ ಭಾವನೆಯನ್ನು ಜನರಲ್ಲಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎಐಡಿಎಸ್‌ಓ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎನ್.ಅಶ್ವಿನಿ ಹೇಳಿದರು.

ಶನಿವಾರ ಕೆಆರ್ ವೃತ್ತದ ಯುವಿಸಿಇ ಅಲುಮ್ನಿ ಸಭಾಂಗಣದಲ್ಲಿ ನಡೆದ ಎಐಡಿಎಸ್‌ಓ ಸಂಘಟನೆಯ ‘9ನೇ ಜಿಲ್ಲಾ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಶಕ್ತಿ ಸಂಘಟನೆಯ ಜೊತೆ ಕೈಜೋಡಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕು. ದೇಶದ ಐಕ್ಯತೆ ಮತ್ತು ಸಹಿಷ್ಣುತೆ ಭಾವನೆಯನ್ನು ಜನರಲ್ಲಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜತೆಗೆ, ಜನಪ್ರತಿನಿಧಿಗಳು ಮಾಡುವ ಅನ್ಯಾಯ ಹಾಗೂ ಅಕ್ರಮಗಳ ವಿರುದ್ಧ ನಡೆಯುವ ಹೋರಾಟದಲ್ಲಿ ತೊಡಗಬೇಕು ಎಂದರು.

ಎಐಡಿಎಸ್‌ಒ ಸಂಘಟನೆಯು ಕಳೆದ ಆರು ದಶಕಗಳಿಂದ, ಸಮಾಜದಲ್ಲಿನ ಅನ್ಯಾಯವನ್ನು ಕಂಡಾಗ ಮೌನಿಯಾಗಿರದೆ, ಅದರ ವಿರುದ್ಧ ಹೋರಾಡುವಂತಹ ಮನೋಭಾವನೆಯನ್ನು ಯುವ ಜನರಲ್ಲಿ ತುಂಬುತ್ತಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಅಜಯ್ ಕಾಮತ್ ಮಾತನಾಡಿ, ಸರಕಾರಿ ವೈದ್ಯಕೀಯ ಕಾಲೇಜಿನಲ್ಲಾದ ಶುಲ್ಕ ಹೆಚ್ಚಳ ಹಾಗೂ ಎನ್‌ಆರ್‌ಐ ಕೋಟಾವನ್ನು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಜಾರಿಗೊಳಿಸುತ್ತಿರುವುದನ್ನು ಖಂಡಿಸಿ ಹೋರಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದೇವೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News