ಯೋಧ ಅಭಿನಂದನ್ ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ಬೆಂಗಳೂರಿಗೆ ಆಗಮನ ?

Update: 2019-03-03 14:21 GMT

ಬೆಂಗಳೂರು,ಮಾ.3: ಪಾಕಿಸ್ತಾನದಿಂದ ಭಾರತಕ್ಕೆ ಹಿಂದುರಿಗಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಫೈಟರ್ ಜೆಟ್ ಏರಲು ಸಮರ್ಥರಿದ್ದಾರೆ ಎಂಬ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ನಗರದ ಎಚ್‌ಎಎಲ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

ದೇಶವೇ ಹೆಮ್ಮೆ ಪಡುತ್ತಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಫೈಟರ್ ಜೆಟ್ ಏರಲು ಸಮರ್ಥರಿದ್ದಾರೆಯೇ ಅನ್ನುವ ಪರೀಕ್ಷೆಗೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ದಿಲ್ಲಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಪರೀಕ್ಷೆ ಪೂರ್ಣವಾದ ನಂತರ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.

ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸುವ ಸಂದರ್ಭದಲ್ಲಾದ ಅಪಘಾತದ ವೇಳೆ ಪ್ಯಾರಾಚ್ಯೂಟ್ ಬಳಸಿ ಕೆಳಗೆ ಬಿದ್ದಿದ್ದರಿಂದ ಬೆನ್ನುಹುರಿಗೆ ಬಲವಾದ ಪೆಟ್ಟು ಬಿದ್ದಿದ್ದರೆ, ಕಣ್ಣಿಗೆ ತೀವ್ರವಾದ ಪೆಟ್ಟಾಗಿತ್ತು. ಇದರಿಂದ ಅಭಿನಂದನ್ ಮತ್ತೊಮ್ಮೆ ಫೈಟರ್ ಜೆಟ್ ಏರಲು ಕಷ್ಟ. ಹೀಗಾಗಿ, ನಗರದ ಎಚ್‌ಎಎಲ್‌ನಲ್ಲಿನ ಇನ್ಸಿಟ್ಯೂಟ್ ಆಫ್ ಏರೋಸ್ಪೇಸ್‌ನಲ್ಲಿ ದೈಹಿಕ ಪರೀಕ್ಷೆಗೆ ಒಳಪಡಬೇಕಾಗಿದೆ.

ದೈಹಿಕ ಪರೀಕ್ಷೆಯ ಬಳಿಕ ನೀಡುವ ವರದಿಯಲ್ಲಿ ಎಲ್ಲವೂ ಸಕರಾತ್ಮಕ ಅಂಶಗಳು ಕಂಡು ಬಂದರೆ ಅಭಿನಂದನ್ ಯುದ್ಧವಿಮಾನ ಚಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪಾಕ್ ನೆಲದಲ್ಲಿ ಸೆರೆಯಾಗಿದ್ದ ನಚಿಕೇತ್ ದೈಹಿಕ ಸ್ಥಿತಿ ಸ್ಪಂದಿಸದ ಹಿನ್ನೆಲೆಯಲ್ಲಿ ಫೈಟರ್ ಜೆಟ್ ಏರಲು ಸಾಧ್ಯವಾಗಲಿಲ್ಲ. ಹೀಗಾಗಿ ಅಭಿನಂದನ್‌ಗೂ ಅಂತಿಮವಾದ ವೈದ್ಯಕೀಯ ಪರೀಕ್ಷೆ ನಂತರ ಅವರು ಮತ್ತೆ ಯುದ್ಧವಿಮಾನ ಏರಬಹುದಾ ಎನ್ನುವುದು ತಿಳಿದು ಬರುತ್ತದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News