ಕ್ಲಬ್ ಮೇಲೆ ದಿಢೀರ್ ಸಿಸಿಬಿ ದಾಳಿ: 14 ಜನರ ಬಂಧನ

Update: 2019-03-10 16:36 GMT

ಬೆಂಗಳೂರು, ಮಾ.10: ಕಾನೂನು ಬಾಹಿರವಾಗಿ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ 14 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 25 ಸಾವಿರ ರೂ. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ರೆಸಿಡೆನ್ಸಿ ರಸ್ತೆಯ ಕೋನಾರ್ಕ್ ಹೋಟೆಲ್ ಪಕ್ಕದಲ್ಲಿರುವ ಗೋಲ್ಡ್ ಟವರ್ಸ್‌ನಲ್ಲಿರುವ ಓಂ ಕಲ್ಚರಲ್ ರಿಕ್ರಿಯೇಷನ್ ಅಂಡ್ ಸೋಶಿಯಲ್ ಅಸೋಶಿಯೇಷನ್ ಕ್ಲಬ್‌ನಲ್ಲಿ ನ್ಯಾಯಾಲಯದ ನಿಬಂಧನೆಗಳನ್ನು ಉಲ್ಲಂಘಿಸಿ ಸದಸ್ಯರಲ್ಲದ ಕೆಲವು ಜನ ಆಸಾಮಿಗಳು ಹಣ ಪಣವಾಗಿ ಕಟ್ಟಿಕೊಂಡು ಡಾಟ್ ಗೇಮ್ ಎಂಬ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರಿಂದ ಒಟ್ಟು 25 ಸಾವಿರ ರೂ. ನಗದು, ವಿವಿಧ ಮುಖ ಬೆಲೆಯ ಒಟ್ಟು 2,154 ಟೋಕನ್‌ಗಳು, ಒಂದು ಕಪ್ಪು, ಬಿಳಿ, ಹಳದಿ, ಕೆಂಪು, ಹಸಿರು, ನೀಲಿ ಬಣ್ಣದ ಮನೆ ಇರುವ ಡಾಟ್ ಬೋರ್ಡ್, ವಿವಿಧ ಬಣ್ಣದ 20 ಪಿನ್‌ಗಳು ( ಬಾಣಗಳು) ಹಾಗೂ ಕಪ್ಪು, ಬಿಳಿ, ಹಳದಿ, ಕೆಂಪು, ಹಸಿರು, ನೀಲಿ ಬಣ್ಣದ ಆರು ಸ್ಟಿಕ್ಕರ್‌ಗಳನ್ನು ಜಪ್ತಿ ಮಾಡಿ, ಇಲ್ಲಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News