ಸ್ಥಳೀಯರಿಗೆ ಉದ್ಯೋಗಕ್ಕೆ ಯುವ ಇಂಟೆಕ್ ಆಗ್ರಹ

Update: 2019-05-01 08:32 GMT

ಮಂಗಳೂರು, ಮೇ 1: ಕರಾವಳಿ ಭಾಗದ ಜನರಿಗೆ ಸರಿಯಾದ ಉದ್ಯೋಗ ಸಿಗದಿರುವುದರಿಂದ ಜಿಲ್ಲೆಯಲ್ಲಿ ಅಧಿಕ ನಿರುದ್ಯೋಗ ಸಮಸ್ಯೆ ಉದ್ಬವಿಸಿದೆ. ಜಿಲ್ಲೆಯ ವಿದ್ಯಾವಂತ ಯುವಕರನ್ನು ನಾನಾ ಕಂಪನಿಗಳು ಹಾಗೂ ಇಲಾಖೆಗಳು ಕಡೆಗಣಿಸುತ್ತಿದೆ. ಈ ಕಾರಣದಿಂದ ಜಿಲ್ಲೆಯವರಿಗೆ ಮೇ 25ರಂದು ಮಂಗಳೂರಿನಲ್ಲಿ ಉದ್ಯೋಗಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬೃಹತ್ ಸಭೆಯನ್ನು ಕರೆಯಲಾಗಿದೆ ಎಂದು ಯುವ ಇಂಟಕ್ ಕಾನೂನು ಸಲಹೆಗಾರ ದಿನಕರ್ ಶೆಟ್ಟಿ ಹೇಳಿದರು.

ಅವರು ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷಾತೀತವಾಗಿ ಈ ಸಭೆಯನ್ನು ನಡೆಸಲು ನಿರ್ಧಾರ ಕೈಗೊಳ್ಳ ಲಾಗಿದೆ. ಈ ವಿಚಾರದಲ್ಲಿ ಬೃಹತ್ ಹೋರಾಟ ಮಾಡಿ ಜಿಲ್ಲೆಯ ಜನಪ್ರತಿನಿಗಳನ್ನು ಎಚ್ಚರಗೊಳಿಸುವ ಪ್ರಯತ್ನ ಮಾಡಲಾಗುವುದು. ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ 13,500 ನೀಡುವಂತೆ ಸಭೆಯಲ್ಲಿ ಆಗ್ರಹಿಸಲಾಗುವುದು, ಕಾರ್ಮಿಕ ಇಲಾಖೆಯ ಎಲ್ಲ ಯೋಜನೆಗಳನ್ನು ಅಕಾರಿಗಳು ಸಮರ್ಪಕವಾಗಿ ಜಾರಿಗೆ ತರಲು ಯುವ ಇಂಟಕ್ ಆಗ್ರಹಿಸುತ್ತದೆ ಎಂದರು.

ಈ ಸಂದರ್ಭ ಯುವ ಇಂಟಕ್ ಜಿಲ್ಲಾಧ್ಯಕ್ಷ ದಿಕ್ಷಿತ್ ಶೆಟ್ಟಿಘಿ, ಜಿಲ್ಲಾ ಉಪಾಧ್ಯಕ್ಷ ಚಿರಂಜೀವಿ ಅಂಚನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುದಾಸೀರ್ ಕುದ್ರೋಳಿ, ಪ್ರಧಾನ ಕಾರ್ಯದರ್ಶಿ ಡೊಮೆನಿಕ್ ಜೈಸನ್, ನಗರ ಉಪಾಧ್ಯಕ್ಷ ಸವನ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News