ದೇರಳಕಟ್ಟೆ: ಆರ್ಮಿ ಟ್ರೋಫಿ ಪ್ರಯುಕ್ತ ಬೃಹತ್ ರಕ್ತದಾನ

Update: 2019-05-01 15:11 GMT

ಉಳ್ಳಾಲ: ಅಮೆಚೂರು ಕಬ್ಬಡಿ ಅಸೋಶಿಯೇಷನ್ ಮತ್ತು ಕಾಸ್ಕ್ ನರಿಂಗಾನ ಆಯೋಜಿಸಿದ ಆರ್ಮಿ ಟ್ರೋಫಿ 2019 ಇದರ ಪ್ರಯುಕ್ತ ಶಮಾ ಗೋಲ್ಡ್, ಸಹದ ಟ್ರೇಡರ್ಸ್ ಮತ್ತು ಸಹರಾ ಸ್ಪೋರ್ಟ್ಸ್ ಪ್ರಾಯೋಜಕತ್ವ ದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಹರಾ ಸ್ಪೋರ್ಟ್ಸ್ ಕ್ಲಬ್ ದೇರಳಕಟ್ಟೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ರಕ್ತದಾನ ಶಿಬಿರವನ್ನು ಅಶ್ರಫ್ ಮಲಾರ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಕ್ಬಾಲ್ ಶಮಾ ಗೋಲ್ಡ್ ದೇರಳಕಟ್ಟೆ ವಹಿಸಿ ಮಾತನಾಡುತ್ತಾ ಅನ್ನದಾನ ಶ್ರೇಷ್ಟ ದಾನ. ರಕ್ತ ದಾನ ಜೀವ ದಾನ ಎಂದರು.

ವೇದಿಕೆಯಲ್ಲಿ ಹಸೈನಾರ್ ಕುಕ್ಕಾಜೆ, ಸಿದ್ದೀಕ್ ಮಂಜೇಶ್ವರ , ನವಾಝ್ ಕಲ್ಲರಕೋಡಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ 28 ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಹಕರಾದ ಫಾರೂಕ್ ಬಿಗ್ ಗ್ಯಾರೇಜ್ , ದಾವೂದ್ ಬಜಾಲ್, ಅಲ್ತಾಫ್ ಉಳ್ಳಾಲ, ಫಯಾಝ್ ಮಾಡೂರು, ಸಿರಾಜ್ ಪಜೀರ್, ಲತೀಫ್ ಪೆರಿಯಡ್ಕ, ಮುನೀರ್ ಚೆಂಬುಗುಡ್ಡೆ, ಫಾಝಿಲ್ ಬ್ಲಡ್ ಡೋನರ್ಸ್ ಮಂಗಳೂರು, ನಿಝಾಮ್ ಸಹರಾ ಸ್ಪೋರ್ಟ್ಸ್, ನಝ್ವಾನ್ ಸಹರಾ ಸ್ಪೋರ್ಟ್ಸ್, ಶಾಕೀರ್ ಸಹರಾ ಸ್ಪೋರ್ಟ್ಸ್, ಅಕ್ಷಯ್ ಶೆಟ್ಟಿ ಕ್ರೀಡಾಪಟು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ನವಾಝ್ ಕಲ್ಲರಕೋಡಿ ಬ್ಲಡ್ ಡೋನರ್ಸ್ ಮಂಗಳೂರು ನಿರೂಪಿಸಿದರು. ಸಿದ್ದೀಕ್ ಮಂಜೇಶ್ವರ ಬ್ಲಡ್ ಡೋನರ್ಸ್ ಮಂಗಳೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News