ಕಾರ್ಮಿಕರ ಹಕ್ಕು ರಕ್ಷಿಸಲು ಪ್ರಾಮಾಣಿಕ ಹೋರಾಟ : ವಸಂತ ಬಂಗೇರ

Update: 2019-05-01 15:50 GMT

ಬೆಳ್ತಂಗಡಿ: ಕಾರ್ಮಿಕರಿಗೆ ತಮ್ಮ ಹಕ್ಕು ಸವಲತ್ತುಗಳನ್ನು ರಕ್ಷಿಸಲು ಸ್ಪೂರ್ತಿ ನೀಡುವ ದಿನವೇ  ಮೇ ದಿನ. ಇದು ಜಗತ್ತಿn ಕಾರ್ಮಿಕರನ್ನು ಒಂದಾಗಿಸುತ್ತದೆ ಎಂದು ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ ವಸಂತ ಬಂಗೇರ ಹೇಳಿದರು.

ಅವರು ಇಂದು ಅಂಬೇಡ್ಕರ್ ಮೈದಾನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಬಿ.ಎಂ.ಭಟ್ ನೇತೃತ್ವದಲ್ಲಿ ನಡೆದ ಮೇ ದಿನಾಚರಣೆ ಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಕಾರ್ಮಿಕರ ಕೂಗು ಸರಕಾರಕ್ಕೆ ತಲುಪಿದಾಗಲೇ ಶ್ರಮಿಕ ವರ್ಗಕ್ಕೆ ಕೆಲವೊಂದು ಸವಲತ್ತುಗಳು ಸಿಗಲು ಸಾಧ್ಯ ವಾಗುತ್ತದೆ. ಅದಕ್ಕೆ ಕಾರ್ಮಿಕ ಸಂಘಗಳು ಕಟ್ಟಿಬೆಳೆಯಬೇಕು ಕಾರ್ಮಿಕ ನಾಯಕರು ಕಾರ್ಮಿಕರ ಪರ ನಡೆಸುವ ಹೊರಾಟದಲ್ಲಿ ಭಾಗವಹಿಸಬೇಕು ಎಂದರು.

ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಕಾರ್ಮಿಕ ನಾಯಕ ಬಿ.ಎಂ.ಭಟ್, ವರ್ಗ ಪ್ರಜ್ಞೆ ಕಾರ್ಮಿಕರಿಗೆ ಅತೀ ಅಗತ್ಯವಾದ ಪ್ರಜ್ಞೆಯಾಗಿದೆ. ಶೋಷಕರು ಶ್ರಮಿಕ ವರ್ಗಕ್ಕೆ ಸೀಮಿತ ಧರ್ಮ ಪ್ರಜ್ಞೆ ಬೆಳೆಸಿ ಶ್ರಮಿಕರು ತಮ್ಮೋಳಗೆ ಕಚ್ಚಾಡುವಂತೆ ಮಾಡಿ ವಿಶಾಲವಾದ ವರ್ಗ ಪ್ರಜ್ಞೆ ಮೂಡದಂತೆ ತಡೆಯುತ್ತಾ ಶೋಷಕರು ತಮ್ಮ ಸುಲಿಗೆ ಶೋಷಣೆಯನ್ನು ನಿರಂತರ ನಡೆಸುತ್ತಾ ಬರಲು ಯಶಸ್ವಿಯಾಗುತ್ತಾರೆ. ಯಾವ ಉದ್ದೇಶಕ್ಕಾಗಿ ಮೇದಿನ ಉದಯಿಸಿತೋ ಅವರತ್ಯಾಗ ಬಲಿದಾನಗಳು ನಮಗೆ ಪ್ರೆರಣೆಯಾಗಲಿ ಮುಂದಿನ ದಿನಗಳು ಕಾರ್ಮಿಕರ ನೆಮ್ಮದಿಯ ಬದುಕಿಗೆ ನಾಂದಿಯಾಗಲಿ ಎಂದರು.

ಇಂದಿನ ಆಳುವ ವರ್ಗ ಈ ಕಾರ್ಮಿಕರ ಹಕ್ಕು ಸವಲತ್ತುಗಳನ್ನು ನಾಶ ಮಾಡಿ ಮಾಲಕರ ಹಿತಕಾಪಾಡಲು ಮುಂದಾಗುತ್ತಿರುವುದನ್ನು ನಾವು ಗಂಬೀರವಾಗಿ ಪರಿಗಣಿಸಬೇಕು. ಕಾರ್ಮಿಕ ವಿರೋದಿ ಕಾರ್ಮಿಕ ನಾಯಕರೆಂದು ನಾಟವಾಡುವವರ ವಿರುದ್ದವೂ ಹೊರಾಟ ನಡೆಸಬೇಕೆಂದು ಕರೆ ನೀಡಿದರು.

ಹಿರಿಯ ಕಾರ್ಮಿಕ ನಾಯಕರಾದ ಮಂಜುನಾಥ ಅವರು ಮಾತಾಡುತ್ತಾ ಕೆಲವು ಕಾರ್ಮಿಕ ನಾಯಕರು ಮಾಲಕರುಕಷ್ಟದಲ್ಲಿದ್ದಾರೆ ಅದಕ್ಕಾಗಿ ಬೀಡಿ ಕಾರ್ಮಿಕರ ಹಕ್ಕು ಸವಲತ್ತುಗಳಲ್ಲಿ ಕೆಲವನ್ನು ಬಿಟ್ಟುಕೊಡಬೇಕಾಗುತ್ತದೆ ಎನ್ನುತ್ತಾ ಕಾರ್ಮಿಕರಿಗೆ ದ್ರೋಹವೆಸಗುತ್ತಾರೆ ಈ ಕಾರ್ಮಿಕ ವಿರೋಧಿ ನಡೆಯನ್ನು ಪ್ರಶ್ನಿಸಿದರೆ ಪ್ರಶ್ನೆ ಮಾಡಿದವರನ್ನೇ ಇಲ್ಲವಾಗಿಸುವ ಶಡ್ಯಂತ್ರಗಳು ನಡೆಯುತ್ತವೆ ಎಂದರು.

ಹಿರಿಯ ಕಮ್ಯೂನಿಸ್ಟ್ ಮುಖಂಡರುಗಳಾದ ಲಕ್ಷ್ಮಣಗೌಡ, ಬಿ.ವಿಷ್ಣು ಮೂರ್ತಿ ಭಟ್ ಮಾತಾಡಿ ಮೇದಿನಾಚರಣೆಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕೆಲವು ಕಟ್ಟಡಕಾರ್ಮಿಕರಿಗೆಕಾರ್ಡು ವಿತರಿಸಲಾಯಿತು. ದೇವಕಿ ಸ್ವಾಗತಿಸಿದರು.ಈಶ್ವರಿ ವಂದಿಸಿದರು.ಶ್ಯಾಮರಾಜ ಕಾರ್ಯಕ್ರಮ ನಿರೂಪಿಸಿದರು, ವೇದಿಕೆಯಲ್ಲಿ ತಾಲೂಕು ಮುಖಂಡರುಗಳಾದ ಲೋಕೇಶ್‍ ಕುದ್ಯಾಡಿ, ನೆಬಿಸಾ, ಜಯರಾಮ ಮಯ್ಯ, ನಾರಾಯಣ ಕೈಕಂಬ, ಡೊಂಬಯಗೌಡ, ಧನಂಜಯಗೌಡ, ಸಂಜೀವ ನಾಯ್ಕ,  ರಾಮಚಂದ್ರ, ಜಯಶ್ರೀ, ಪುಷ್ಪಾ, ಶೇಖರ ವೇಣೂರು, ವೇದಾವತಿ, ಸುಮಿತ್ರ, ಸುಜಾತ ಹೆಗ್ಡೆ, ಬಿ.ಎ. ರಝಾಕ್, ದಿನೇಶ್ ಮಾಚಾರು, ದೀಕ್ಷಿತಾ, ಅದಿತಿ, ಮಹಿಳಾ ಸಂಘದ ಮುಖಂಡರುಗಳಾದ ಕಿರಣಪ್ರಭಾ, ಕುಮಾರಿ, ಮೆಸ್ಕಾಂ ಸಂಘಟನೆಯ ಮಹೇಶ್, ಆದಿವಾಸಿ ಸಂಘಟನೆಯಚನಿಯಪ್ಪ ಮಲೆಕ್ಕುಡಿಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News