ಎಸ್. ಐ. ಒ ಉಳ್ಳಾಲ ಘಟಕ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

Update: 2019-05-01 16:11 GMT

ಉಳ್ಳಾಲ : ಸ್ಟೂಡೆಂಟ್ ಇಸ್ಲಾಮಿಕ್  ಒರ್ಗನೈಸಷನ್ ಒಫ್ ಇಂಡಿಯಾ ಉಳ್ಳಾಲ ಘಟಕದ ವತಿಯಿಂದ ಎರಡು ದಿನದ ಬೇಸಿಗೆ ಶಿಬಿರವನ್ನು ಬಬ್ಬುಕಟ್ಟೆಯ ಹಿರಾ ಇನ್ಸ್ಟಿಟ್ಯೂಷನ್  ಸಭಾಂಗಣದಲ್ಲಿ  ಆಯೋಜಿಸಲಾಯಿತು.

ಮಕ್ಕಳನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ  ಬೆಳೆಯಲು ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಎಸ್. ಐ. ಒ ಉಳ್ಳಾಲ ಘಟಕವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಎಸ್. ಐ. ಒ ಜಿಲ್ಲಾ ಆಧ್ಯಕ್ಷ  ರಿಝ್ವಾನ್ ಅಜ್ಹರಿ ಕಾರ್ಯಕ್ರಮ  ಉದ್ಘಾಟಿಸಿದರು.

ಜಮಾತೆ ಇಸ್ಲಾಮಿ ಜಿಲ್ಲಾ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್ ಮತ್ತು ಜಮಾತೆ ಇಸ್ಲಾಮಿ ಉಳ್ಳಾಲ ಮಾಜಿ ಘಟಕಾಧ್ಯಕ್ಷ ಎ ಎಚ್ ಮಹಮೂದ್ ಸಾಹೇಬ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಮುಖ್ಯಅತಿಥಿಯಾಗಿ ಆಗಮಿಸಿದ ಜಮಾತೆ ಇಸ್ಲಾಮಿ ಉಳ್ಳಾಲ ಘಟಕಾಧ್ಯಕ್ಷ ಅಬ್ದುಲ್ ಕರೀಂ ಸಮಾರೋಪ ಭಾಷಣವನ್ನು ಮಾಡಿದರು. ಸಾಮಾಜಿಕ ಕಾರ್ಯಕರ್ತ ಸಿ ಎಚ್ ಅಬ್ದುಲ್ ಸಲಾಂ ಅನಿಸಿಕೆಯನ್ನು ವ್ಯಕ್ತಪಡಿಸಿದರು.  ಎಸ್. ಐ. ಒ ಉಳ್ಳಾಲ ಘಟಕಾಧ್ಯಕ್ಷ ನಿಝಾಮ್ ಉಳ್ಳಾಲ, ಎಸ್. ಐ. ಒ ಜಿಲ್ಲಾ ಆಧ್ಯಕ್ಷ  ರಿಝ್ವಾನ್ ಅಜ್ಹರಿ, ಅಸಿಫ್ ಕೋಟೆಕ್ಕಾರ್, ಶಾಕಿಬ್ ಕಲ್ಲಾಪು, ಕೈಫ್ ಕೋಟೆಕ್ಕಾರ್ ಕಿರಾತ್ ಪಠಿಸಿದರು.  ಅಶೀರುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News