ಮೇ 4: ಮಂಚಿ ಬೋಲ್ಪು ಕಲಾತಂಡದ 25ನೇ ವಾರ್ಷಿಕೋತ್ಸವ

Update: 2019-05-02 10:24 GMT

ಬಂಟ್ವಾಳ, ಮೇ 2: ತಾಲೂಕಿನ ಮಂಚಿ ಬೋಲ್ಪು ಕಲಾತಂಡದ 25ನೇ ವಾರ್ಷಿಕೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ದಿ. ಕೊರಗಪ್ಪ ಶಿಂಗಾರಕೋಡಿಯವರ 2ನೇ ವರ್ಷದ ಸಂಸ್ಕರಣಾ ಕಾರ್ಯಕ್ರಮವು ಮೇ 4 ರಂದು ಮಂಚಿ ಶ್ರೀ ಅರಸು ಕುರಿಯಾಡಿ ತ್ತಾಯ ಮೂವರು ದೈವಂಗಳ ಮಾಡದ ವಠಾರದಲ್ಲಿ ನಡೆಯಲಿದೆ ಎಂದು ಕಲಾತಂಡದ ಸಂಚಾಲಕ ಎಂ.ಡಿ.ಮಂಚಿ ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಆಶೋಕ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಚಿಣ್ಣರಲೋಕ ಸೇವಾಟ್ರಸ್ಟ್‍ನ ಸಂಚಾಲಕ ಮೋಹನದಾಸ ಕೊಟ್ಟಾರಿ ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.

ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಸಾಧಕರಾದ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ, ರವಿಕುಮಾರ್ ಮಂಚಿ, ಪುನೀತ್ ಬೋಳಿಯಾರ್, ಆನಂದ ತಾಮರಾಜೆಅವರನ್ನು ಸನ್ಮಾನಿಸಲಾಗುವುದು. ಬಳಿಕ ಪ್ರಜ್ವಲ್ ಮತ್ತು ದೀಪಿಕಾ ಅವರಿಂದ ನೃತ್ಯ ವೈಭವ ಹಾಗೂ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟವು ಜರಗಲಿದೆ ಎಂದರು.

ಬೊಲ್ಪು ಕಲಾತಂಡವು ಕಳೆದ 25 ವರ್ಷಗಳಲ್ಲಿ ಸಾಹಿತ್ಯಿಕ ಚಟುವಟಿಕೆ, ಜನಪದ ಕಲೆಗೆ ಸಂಬಂಧಿಸಿದ ಕಾರ್ಯಕ್ರಮ, ತರಬೇತಿ ಶಿಬಿರಗಳನ್ನು ನಡೆಸಿದ್ದು, ಇದೀಗ ಇಪ್ಪತ್ತೈದು ವರ್ಷವನ್ನು ಪೂರೈಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಲಾತಂಡದ ಸಂಚಾಲಕ ವಿಮಲೇಶ್ ಶಿಂಗಾರಕೋಡಿ, ಅಧ್ಯಕ್ಷ ಆಶೋಕ್ ಬಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News