ಪಿ.ಎ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾಹಿತಿ ಕಾರ್ಯಾಗಾರ

Update: 2019-05-02 10:33 GMT

ಕೊಣಾಜೆ: ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕೆ.ಟೆಕ್ ಇನ್ನೋವೇಶನ್ ಹಬ್ ಮತ್ತು ಪಿ.ಎ.ಸಮೂಹ ಸಂಸ್ಥೆ ಸಹಭಾಗಿತ್ವದಲ್ಲಿ ಪೇಸ್-ನೈನ್ ಐಡಿಯಾಥಾನ್ ಮಾಹಿತಿ ಕಾರ್ಯಾಗಾರವು ಪಿ.ಎ.ವಿದ್ಯಾಲಯದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿದ ಅಮೇರಿಕಾದ ಸ್ಪಾಟ್ ಬಯೋಸಿಸ್ಟಮ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಡಾ.ಮೇಲಾನಿ ರಾಡ್ರಿಗಸ್‍ರವರು ಸ್ಟಾರ್ಟ್ ಆಪ್ ಕಂಪೆನಿಯ ಮಹತ್ವ ಹಾಗೂ ಅಭಿವೃದ್ಧಿ ಪಡಿಸುವ ಮಹತ್ವದ ವಿಷಯವನ್ನು ತಿಳಿಸಿ, ಅಮೇರಿಕದ ಸಿಲಿಕಾನ್ ವ್ಯಾಲಿಯ ನೀರಾರು ಸ್ಟಾರ್ಟ್ ಆಫ್ ಕಂಪೆನಿಯ ಅಭಿವೃದ್ಧಿ ಪಥವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎ.ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ.ರಮೀಜ್ ಎಂ.ಕೆ.ಅವರು ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಿ.ಎ.ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಸರ್ಫ್‍ರಾಜ್ ಹಾಶಿಮ್ ಭಾಗವಹಿಸಿ ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ದೂರಗೊಳಿಸಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸುವುಸುವುದರಿಂದ ಯಾವುದೇ ಉದ್ದೇಶಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಶರ್ಮಿಳಾ ಕುಮಾರಿ, ಡಾ.ಲತಾ ಕೃಷ್ಣನ್, ಡಾ.ಪಾಲಾಕ್ಷಪ್ಪ ,ಪ್ರೊ.ಸೂಫಿರವರು ಉಪಸ್ಥಿತರಿದ್ದರು. ಫೇಸ್ ನೈನ್ ಇಂಕ್ಯೂಬೆಷನ್ ಸೆಂಟರ್‍ನ ಪ್ರಾದೇಶಿಕ ಸಂಯೋಜಕರಾದ ಡಾ.ಕೃಷ್ಣ ಪ್ರಸಾದ್ ನೂರಳಬೆಟ್ಟು ಅವರು ಸ್ವಾಗತಿಸಿದರು. ಇಲೆಕ್ಟ್ರಿಕಲ್ ವಿಭಾಗದ ಪ್ರೊ. ಫಾತಿಮತ್ ರೆಹಮತ್ ಕಾರ್ಯಕ್ರಮ ನಿರೂಪಿಸಿದರು. ಬಯಾಟೆಕ್ನಾಲಜಿ ವಿಭಾಗದ ಡಾ.ರೋನಾಲ್ಡ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News