ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಕ್ರೀಡೋತ್ಸವ: ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದಿಂದ ಉತ್ತಮ ಸಾಧನೆ

Update: 2019-05-02 10:37 GMT

ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಬಿ.ಇಡಿ ಕಾಲೇಜು ಮಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರು ವಿಶ್ವ ವಿದ್ಯಾಲಯವು ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಿದ ಅಂತರ್ ಕಾಲೇಜು ಮಟ್ಟದ ಕ್ರೀಡೋತ್ಸವದಲ್ಲಿ ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು  ಪಥಸಂಚಲನದಲ್ಲಿ ಪ್ರಥಮ ಹಾಗು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿರುತ್ತಾರೆ.

ಮಹಿಳೆಯರ ಅಥ್ಲೆಟಿಕ್ಸ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮತ್ತು ವೈಯುಕ್ತಿಕ ವಿಭಾಗದಲ್ಲಿ ವಿದ್ಯಾ ಎಚ್.  200ಮೀ. ಓಟ, ಹೈಜಂಪ್, ಲಾಂಗ್ ಜಂಪ್‍ನಲ್ಲಿ ಪ್ರಥಮ ಸ್ಥಾನಗಳಿಸುವುದರೊಂದಿಗೆ ಮಹಿಳಾ ವಿಭಾಗದ ಚಾಂಪಿಯನ್‍ಗೆ ಭಾಜನರಾಗಿರುತ್ತಾರೆ. ಪುರುಷರ ವಿಭಾಗದ ವೈಯುಕ್ತಿಕ ಸ್ಪರ್ಧೆಗಳಲ್ಲಿ ಅರ್ಜುನ ಜಿ.ಕೆ. 100 ಮೀ.,200ಮೀ. ಓಟ ಹಾಗೂ ಲಾಂಗ್ ಜಂಪ್‍ನಲ್ಲಿ ಪ್ರಥಮ ಸ್ಥಾನ ಗಳಿಕೆಯೊಂದಿಗೆ ಪುರುಷರ ವಿಭಾಗದ ಚಾಂಪಿಯನ್ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಕ್ರೀಡಾ ಸಾಧನೆಯೊಂದಿಗೆ ವಿದ್ಯಾಲಯಕ್ಕೆ ಕೀರ್ತಿ ತಂದ ಬಿ.ಇಡಿ ಪ್ರ ಶಿಕ್ಷಣಾರ್ಥಿಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಸೂಕ್ತ ಮಾರ್ಗದರ್ಶನ ನೀಡಿರುವ ದ್ಯೆಹಿಕ ಶಿಕ್ಷಣಾ ವಿಭಾಗದ ಶಿಕ್ಷಕರಾದ ಇಲಿಯಾಸ್ ಅವರಿಗೆ ಕಾಲೇಜಿನ ಆಡಳಿತ ಮಂಡಳಿಯ ಪರವಾಗಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್, ಸಂಚಾಲಕರಾದ ಸೈಯದ್ ಬ್ಯಾರಿ ಹಾಗೂ ಪ್ರಾಚಾರ್ಯರಾದ ಕೆ. ಸಿದ್ದಪ್ಪ ರವರು ಅಭಿನಂದಿಸಿರುತ್ತಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News