ಉಡುಪಿ: ನೇಣು ಬಿಗಿದು ಕಾರ್ಮಿಕ ಆತ್ಮಹತ್ಯೆ

Update: 2019-05-02 17:21 GMT

ಉಡುಪಿ, ಮೇ 2: ವಲಸೆ ಕಾರ್ಮಿಕನೋರ್ವ ತಾನು ವಾಸಕ್ಕಿದ್ದ ಬಾಡಿಗೆ ಮನೆ ಸಮೀಪದ ಹಾಡಿಯಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಅಪರಾಹ್ನದ ವೇಳೆ ನಡೆದಿದೆ.

ಮೃತರನ್ನು ಗದಗ ಜಿಲ್ಲೆಯ ಸಿದ್ದಾರಮೇಶ್ವರ ನಗರ ಮಲ್ಲಸಮುದ್ರ ನಿವಾಸಿ ಶಿದ್ದಪ್ಪ ದೇವಪ್ಪ ಪೂಜಾರ (28) ಎಂದು ಗುರುತಿಸಲಾಗಿದೆ.

ಈತ ಬುಧವಾರ ಮಧ್ಯಾಹ್ನ 3 ರಿಂದ 3.30 ಮಧ್ಯಾವಧಿಯಲ್ಲಿ ಪುತ್ತೂರು ಗ್ರಾಮದ ನಿಟ್ಟೂರು ಬಾಳಿಗಾ ಫಿಶ್‌ನೆಟ್ ಬಳಿ ಸಮೀಪದ ಅಡ್ಕದಕಟ್ಟೆಯ ಗೌರಿ ಶಂಕರ್ ಭಟ್ ಎಂಬುವವರ ಹಾಡಿಯ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News