ಮೂಡುಬಿದಿರೆಯಲ್ಲಿ ಉಚಿತ ಸಾಮೂಹಿಕ ವಿವಾಹ

Update: 2019-05-02 18:39 GMT

ಮೂಡುಬಿದಿರೆ: ದಾಂಪತ್ಯ ಜೀವನ ವಾಕ್ ಮತ್ತು ಅರ್ಥದಂತೆ ಅನ್ಯೋನ್ಯವಾಗಿದ್ದಾಗ ಆದರ್ಶ ದಂಪತಿಗಳಾಗಿ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ ಎಂದು ಗುರುಪುರ ಶ್ರೀ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ತುಳುನಾಡ ಸೇನೆ ಮೂಡುಬಿದಿರೆ ಆಶ್ರಯದಲ್ಲಿ ಭಗತ್‍ಸೇನೆ ಮೂಡುಬಿದಿರೆ ಸಹಕಾರದೊಂದಿಗೆ ಮೂಡುಬಿದಿರೆ ಪದ್ಮಾವತಿ ಕಲ್ಯಾಣಮಂಟಪದಲ್ಲಿ    

ಅಲಂಗಾರು ಈಶ್ವರ ಭಟ್ ಮತ್ತು ವೈದಿಕ ವೃಂದದವರ ಪೌರೋಹಿತ್ಯದಲ್ಲಿ  ಗುರುವಾರ ನಡೆದ ಉಚಿತ ಸಾಮೂಹಿಕ ವಿವಾಹದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. 

ಉದ್ಯಮಿ ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ, `ಸರಳತೆಯನ್ನು ಪ್ರತಿಪಾದಿಸುವ  ಸಾಮೂಹಿಕ ವಿವಾಹದಲ್ಲಿ ಬಹುತೇಕ ಸಾಂಪ್ರದಾಯಿಕ ಕ್ರಮಗಳನ್ನು ಅನುಸರಿಸಲಾಗಿರುವುದು ಶ್ಲಾಘನೀಯ' ಎಂದರು. 

ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಜಿ.ಪಂ. ಉಪಾಧ್ಯಕ್ಷೆ  ಕಸ್ತೂರಿ ಪಂಜ, ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ತೆಂಕಮಿಜಾರು ಗ್ರಾ.ಪಂ, ಅಧ್ಯಕ್ಷ  ಹರಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ,  ಬಿಜೆಪಿ ಜಿಲ್ಲಾ ಉಪಾಧ್ಯಕ್ಷ  ಕೆ.ಪಿ. ಜಗದೀಶ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ., ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ತೋಡಾರು, ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ  ಯಾದವ ಶೆಟ್ಟಿ, ಮೀರಾ ಬಾಯಿಂದರ್ ಬಿಜೆಪಿ ಉಪಾಧ್ಯಕ್ಷ ಸಾಯಿ ಪೂಂಜ ಮುಂಬೈ, ಮಂಗಳೂರಿನ ಮಾಜಿ ಮೇಯರ್ ಮಿಜಾರುಗುತ್ತು  ಶಶಿಧರ ಹೆಗ್ಡೆ, ತೋಡಾರು ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಸಲಾಂ, ಮೂಡುಬಿದಿರೆ  ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಹಾಜಿ  ತೋಡಾರು ಮುಖ್ಯ ಅತಿಥಿಗಳಾಗಿದ್ದರು.

ತುಳುನಾಡ ಸೇನೆ ಸ್ಥಾಪಕಾಧ್ಯಕ್ಷ  ಸುರೇಶ್ ಶೆಟ್ಟಿ , ಹರಿಮೀನಾಕ್ಷಿ ದೋಟ ಮಿಜಾರು, ಹರಿಯಪ್ಪ ಶೆಟ್ಟಿ, ಅಧ್ಯಕ್ಷ  ಲಕ್ಷ್ಮೀಶ ಶೆಟ್ಟಿ ಅತಿಥಿಗಳನ್ನು  ಗೌರವಿಸಿದರು. 
ಭಗತ್‍ಸೇನೆಯ ಉಪಾಧ್ಯಕ್ಷ ಯೋಗೀಶ್ ಬೆದ್ರ ಸ್ವಾಗತಿಸಿದರು. 

ಭಗತಸೇನೆಯ ಸ್ಥಾಪಕ ಅಧ್ಯಕ್ಷ ಸುಜಿತ್ ಶೆಟ್ಟಿ, ಅಧ್ಯಕ್ಷ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಬೆದ್ರ, ಸಂದೀಪ್ ಎಂ.ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ಆಚಾರ್ಯ, ಎರಡೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ನಿವೃತ್ತ ಸೈನಿಕ ರಾಜೇಂದ್ರ, ಮೂಡುಬಿದಿರೆ ಸ್ಪೂರ್ತಿ ಭಿನ್ನ ಸಾಮಥ್ರ್ಯದ ಮಕ್ಕಳ ಶಾಲೆಯ ಸ್ಥಾಪಕ ಪ್ರಕಾಶ್ ಶೆಟ್ಟಿಗಾರ್, ಬಂಟ್ವಾಳ ಮೇರಮಜಲು  ಶ್ರೀಮಾತಾ ಲಕ್ಷಣೆ  ಶಾಂತಿಧಾಮದ ಸ್ಥಾಪಕ ಕಾಂತಾಡಿಗುತ್ತು ಹರೀಶ್ ಪೆರ್ಗಡೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಳು ಕರಣ್ ಹೆಗೀಸ್ಟ್ ಅವರ ಹೆತ್ತವರನ್ನು ಸಮ್ಮಾನಿಸಲಾಯಿತು. 

ಬೆಳಗ್ಗೆ ಗಂ. 10.30ಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ  ಐಕಳ ಹರೀಶ ಶೆಟ್ಟಿ , ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಗಣ್ಯರೊಂದಿಗೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ಪದ್ಮಾವತಿ ಕಲಾಮಂದಿರದವರೆಗೆ ವಧೂವರರು ಹಾಗೂ ಪರಿವಾರದವರ ದಿಬ್ಬಣ ಸಾಗಿ ಬಂದಿತು. 

ಭಗತ್‍ಸೇನೆಯ ಉಪಾಧ್ಯಕ್ಷ ಯೋಗೀಶ್ ಸ್ವಾಗತಿಸಿದರು. ಪ್ರತೀಕ್ಷಾ, ಶ್ರೇಯಾ ಮಾರ್ಲ ಕಲ್ಲಬೆಟ್ಟು  ಸನ್ಮಾನಪತ್ರ ವಾಚಿಸಿದರು. ಸಂತೋಷ್ ಸಿದ್ಧಕಟ್ಟೆ ನಿರೂಪಿಸಿದರು. ಶ್ರೇಯಾ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News