‘ಮೇಲ್ತೆನೆ’ಯಿಂದ ಸಂತಾಪ ಸೂಚಕ ಸಭೆ

Update: 2019-05-02 18:49 GMT

ಮಂಗಳೂರು, ಮೇ 2: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯ ವತಿಯಿಂದ ಅಗಲಿದ ಇಬ್ಬರು ಬ್ಯಾರಿ ಮುಖಂಡರಿಗೆ ಸಂತಾಪ ಸೂಚಕ ಸಭೆಯು ಬುಧವಾರ ಉಳ್ಳಾಲ ಮದನಿ ಜೂನಿಯರ್ ಕಾಲೇಜಿನಲ್ಲಿ ಜರುಗಿತು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬ್ಯಾರಿ ಸಾಹಿತಿ ಅಬ್ದುಲ್ ಖಾದರ್ ಹಾಜಿ ಗೋಳ್ತಮಜಲು ಅವರ ಬಗ್ಗೆ ಅಧ್ಯಕ್ಷ ಹಂಝ ಮಲಾರ್, ಉಳ್ಳಾಲದ ಎ.ಎ. ಖಾದರ್ ಅವರ ಬಗ್ಗೆ ಸದಸ್ಯ ಇಸ್ಮತ್ ಪಜೀರ್ ಸ್ಮರಿಸಿದರು.

ಉಳ್ಳಾಲ ನಗರಸಭೆಯ ಕೌನ್ಸಿಲರ್‌ಗಳಾದ ಯು.ಎ.ಇಸ್ಮಾಯೀಲ್, ಅಸ್ಗರ ಅಲಿ, ಮಾಜಿ ಕೌನ್ಸಿಲರ್ ಫಾರೂಕ್ ಉಳ್ಳಾಲ್, ಮದನಿ ಎಜುಕೇಶನ್ ಎಸೋಸಿಯೇಶನ್‌ನ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಖಾಸಿಂ, ಕೋಶಾಧಿಕಾರಿ ಹಾಜಿ ಯು.ಪಿ.ಅರಬಿ, ಸಂಚಾಲಕ ಯು.ಎನ್. ಇಬ್ರಾಹೀಂ, ಸದಸ್ಯರಾದ ಹಸನಬ್ಬ ಮಾರ್ಗತಲೆ, ಸೈಯದ್ ತಾಹಿರ್ ತಂಙಳ್, ರಿಯಾಝ್ ಮಂಗಳೂರು, ಇಬ್ರಾಹೀಂ ಆಲಿಯಬ್ಬ, ಮದನಿ ಶಿಕ್ಷಣ ಸಂಸ್ಥೆಯ ಬೋಧಕೇತರ ಶಂಕರ್ ಪಾಟಾಳಿ, ಮೇಲ್ತೆನೆಯ ಸದಸ್ಯರಾದ ಮುಹಮ್ಮದ್ ಆಶೀರುದ್ದೀನ್ ಮಂಜನಾಡಿ, ಮುಹಮ್ಮದ್ ಬಾಷಾ ನಾಟೆಕಲ್ ಉಪಸ್ಥಿತರಿದ್ದರು.

ಮೇಲ್ತೆನೆಯ ಕೋಶಾಧಿಕಾರಿ ಹಾಗೂ ಮದನಿ ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಸ್ವಾಗತಿಸಿದರು. ಸದಸ್ಯ ಬಶೀರ್ ಅಹ್ಮದ್ ಕಿನ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಬಶೀರ್ ಕಲ್ಕಟ್ಟ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News