ರಮಝಾನ್‌ನಲ್ಲಿ ದಿನಪೂರ್ತಿ ನೀರು ಪೂರೈಕೆಗೆ ಮನವಿ
Update: 2019-05-02 18:51 GMT
ಮಂಗಳೂರು, ಮೇ 2: ಪವಿತ್ರ ರಮಝಾನ್ ಉಪವಾಸ ಆಚರಣೆಯು ಮೇ 6ರಂದು ಆರಂಭಗೊಳ್ಳುವ ಸಾಧ್ಯತೆ ಇರುವುದರಿಂದ ದಿನಪೂರ್ತಿ ನೀರು ಪೂರೈಕೆ ಮಾಡಬೇಕು ಮತ್ತು ರಾತ್ರಿ ಕೂಡ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿರುವುದರಿಂದ ದಾರಿದೀಪದ ವ್ಯವಸ್ಥೆ ಕಲ್ಪಿಸಬೇಕು ಎಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್‌ರ ಅಧ್ಯಕ್ಷತೆಯಲ್ಲಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಉಪಾಧ್ಯಕ್ಷರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಅಶ್ರಫ್, ಕಾರ್ಯದರ್ಶಿಗಳಾದ ಸಿ.ಎಂ.ಮುಸ್ತಫಾ, ಮುಹಮ್ಮದ್ ಬಪ್ಪಳಿಗೆ, ಅಹ್ಮದ್ ಬಾವಾ ಬಜಾಲ್, ಡಿ.ಎಂ.ಅಸ್ಲಂ, ಎಂ.ಎ.ಅಶ್ರಫ್ ಉಪಸ್ಥಿತರಿದ್ದರು.