ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ: ಸದ್ಭಾವನಾ ವೇದಿಕೆಯಿಂದ ಮನವಿ

Update: 2019-05-03 12:31 GMT

ಮಂಗಳೂರು, ಮೇ 3: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ಖಂಡಿಸಿ ಸದ್ಭಾವನಾ ವೇದಿಕೆ ಜಪ್ಪುವರ್ತುಲದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿಲಾಯಿತು.

ಶ್ರೀಲಂಕಾದ ಧಾರ್ಮಿಕ ಕೇಂದ್ರಗಳು ಹಾಗೂ ಹೊಟೇಲ್‌ಗಳಲ್ಲಿ ನಡೆದಿರುವ ಬಾಂಬ್ ದಾಳಿ ಮಾನವ ವಿರೋಧಿ ದುಷ್ಕೃತ್ಯ ಎಂದು ಹೇಳಿರುವ ಸದ್ಭಾವನಾ ವೇದಿಕೆ, ಈ ರೀತಿ ಭಯೋತ್ಪಾದಕರು ಜನರ ಪ್ರಾಣ ಹಾನಿ, ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುತ್ತಿರುವ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಶ್ರೀಲಂಕಾ ನೆರೆಯ ರಾಷ್ಟ್ರವಾಗಿರುವುದರಿಂದ ಭಾರತವು ಸಮಾಜದ ವಿವಿಧ ನಂಬಿಕೆ ಹಾಗೂ ಸಮುದಾಯಗಳ ಪ್ರತಿನಿಧಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಕಳುಹಿಸಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವುದಲ್ಲದೆ, ಸಂತ್ರಸ್ತ ಕುಟಂಬಗಳಿಗೆ ಸಾಂತ್ವಾನವನ್ನು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷ ಎಂ.ವಿ. ಸುರೇಶ್ ಸೇರಿದಂದೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News