ಕೆಸಿಸಿಐನಿಂದ ‘ರಫ್ತುದಾರರೊಂದಿಗೆ ಸಂವಾದ’ ರಫ್ತು ಕ್ಷೇತ್ರಕ್ಕೆ ಉತ್ತೇಜನ: ಎಸ್.ಸತೀಶ
ಮಂಗಳೂರು, ಮೇ 3: ಸರಕು ರ್ತು ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತರುವ ನಿಟ್ಟಿನಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಮುಂದಿನ ಅಕ್ಟೋಬರ್ ನಲ್ಲಿ ಪ್ರಕಟಿಸಲಾಗುವುದು. ರಫ್ತು ಕ್ಷೇತ್ರದ ಉದ್ಯಮಿಗಳಿಗೆ ಉತ್ತೇಜನ ನೀಡುವ ಅನೇಕ ಅಂಶಗಳನ್ನು ಹೊಸ ನೀತಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಷನ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್. ಸತೀಶ ಹೇಳಿದರು.
ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಕೆಸಿಸಿಐ)ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ರಫ್ತುದಾರರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊದಲನೇ ಸ್ಥಾನ ಗುಜರಾತ್‌ಗೆ, ಎರಡನೇ ಸ್ಥಾನ ಮಹಾರಾಷ್ಟ್ರ ಮತ್ತು ಮೂರನೇ ಸ್ಥಾನ ತಮಿಳುನಾಡು ಪಡೆದುಕೊಂಡಿದೆ. ನಮ್ಮ ರಾಜ್ಯದ ಸದ್ಯದ ಸ್ಪರ್ಧೆ ತಮಿಳುನಾಡನ್ನು ಹಿಂದಿಕ್ಕಬೇಕಾದರೂ ನಮ್ಮ ರಾಜ್ಯದ ರುತ್ತ ಪ್ರಮಾಣವನ್ನು ದ್ವಿಗುಣಗೊಳಿಸಬೇಕು. ಎರಡು ರಾಜ್ಯಗಳ ರುತ್ತ ಪ್ರಮಾಣದಲ್ಲಿ ಅಷ್ಟೊಂದು ಅಂತರವಿದೆ. 2014-19ರ ಕೈಗಾರಿಕಾ ನೀತಿಯು ರುತ್ತ ಕ್ಷೇತ್ರದಲ್ಲಿ ಶೇ.12ರ ವೃದ್ಧಿ ನಿರೀಕ್ಷಿಸಿದ್ದರೂ, ಶೇ.10.72 ವೃದ್ಧಿ ಮಾತ್ರ ಸಾಧ್ಯವಾಗಿದೆ ಎಂದರು.
2014-15ನೇ ಸಾಲಿಗೆ ಹೋಲಿಸಿದರೆ 2017-18ನೇ ಸಾಲಿನಲ್ಲಿ ರ್ತು ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ನೀತಿ ಹಲವಾರು ಉತ್ತೇಜಕ ಅಂಶ ಒಳಗೊಂಡಿದೆ. ದೇಶದ ಉತ್ಪನ್ನಗಳು ಚೀನಾದ ಮಾರುಕಟ್ಟೆ ಪ್ರವೇಶಿಸಬೇಕಿದರೆ ಕೆಲವು ಪ್ರಮಾಣ ಪತ್ರಗಳನ್ನು ಪಡೆಯುವುದು ಅವಶ್ಯಕ. ಇವುಗಳಿಗೆ ನೀಡಬೇಕಾದ ಶುಲ್ಕವನ್ನು ಸರಕಾರ ಮರುಪಾವತಿಸುವ ಅವಕಾಶ ಹೊಸ ನೀತಿಯಲ್ಲಿದೆ ಎಂದು ಹೇಳಿದರು.
ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆಯಲ್ಲಿ ರ್ತು ನಿರ್ವಹಣಾ ತರಬೇತಿ ಶಿಬಿರಗಳ ಶುಲ್ಕದಲ್ಲಿಯೂ ರಿಯಾಯಿತಿ ನೀಡಲಾಗುವುದು. ವಿದೇಶಿ ಮಾರುಕಟ್ಟೆ ಅಧ್ಯಯದ ದೃಷ್ಟಿಯಿಂದ ನಡೆಯುವ ಪ್ರದರ್ಶನಗಳಿಗೂ ಪ್ರೋತ್ಸಾಹ ನೀಡಲಾಗುವುದು. ಎಲ್ಲ ಸೌಕರ್ಯಗಳನ್ನೂ ಬಳಸಿಕೊಂಡು ಮುಂದಿನ ಐದು ವರ್ಷಗಳಲ್ಲಿ ನಾವು ದೇಶದಲ್ಲಿ 3ನೇ ಸ್ಥಾನಕ್ಕೆ ಏರಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದರು.
ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಉಪಾಧ್ಯಕ್ಷ ಐಸಾಕ್ ವಾಸ್, ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಜಂಟಿ ನಿರ್ದೇಶಕ ಬಿ.ಕೆ. ಶಿವಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್ ಉಪಸ್ಥಿತರಿದ್ದರು.