ಮೇ 5ರಂದು ‘ಸ್ವಾತಂತ್ರ್ಯದ ಕಹಳೆ’ ಪುಸ್ತಕ ಬಿಡುಗಡೆ
Update: 2019-05-03 15:54 GMT
ಕಾಪು, ಮೇ 3: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ ಮತ್ತು ಹಿರಿಯ ಸಾಹಿತಿ ಮಮ್ತಾಜ್ ಬೇಗಂ ಬೆಳಪು ಅವರ ಕಾದಂಬರಿ ‘ಸ್ವಾತಂತ್ರ್ಯದ ಕಹಳೆ’ ಬಿಡುಗಡೆ ಸಮಾರಂಭವು ಮೇ 5ರಂದು ಬೆಳಗ್ಗೆ ಗಂಟೆ 10ಗಂಟೆಗೆ ಕಾಪು ರೋಟರಿ ಭವನದಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಲಿದ್ದು, ಕಾದಂಬರಿಯನ್ನು ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಬಿಡುಗಡೆ ಮಾಡಲಿರುವರು. ಮಂಗಳೂರು ವಿವಿ ಶ್ರೀನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಪುಸ್ತಕ ವಿಮರ್ಶೆ ಮಾಡಲಿರುವರು ಎಂದು ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಪ್ರಕಟಣೆ ತಿಳಿಸಿದ್ದಾರೆ.