ಮಲಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ಅಕ್ಷಯ ತೃತೀಯ ವಿಶೇಷ ಕೊಡುಗೆ

Update: 2019-05-03 16:04 GMT

ಉಡುಪಿ, ಮೇ 3: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮಲಬಾರ್ ಗೋಲ್ಡ್‌ಅಂಡ್ ಡೈಮಂಡ್ಸ್ ಅಕ್ಷಯ ತೃತೀಯ ಪ್ರಯುಕ್ತ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದೆ.

ಈಗಾಗಲೇ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದ್ದು, ಮೇ 6ರವರೆಗೆ ಮುಂಗಡ ಮಾಡುವ ಗ್ರಾಹಕರಿಗೆ ಚಿನ್ನದ ತೂಕಕ್ಕೆ ಸರಿಸಮಾನವಾದ ಬೆಳ್ಳಿಯನ್ನು ನೀಡಲಾಗುತ್ತದೆ. ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್‌ನಲ್ಲಿ ಶೇ.50ರವರೆಗೆ ಕಡಿತ ಮಾಡಲಾಗುವುದು. ವಜ್ರದ ಮೌಲ್ಯದಲ್ಲಿ ಶೇ.20 ರವರೆಗೆ ಕಡಿತ ಮಾಡ ಲಾಗುವುದು.

ಮುಂಗಡವಾಗಿ ಶೇ.10ನ್ನು ಪಾವತಿಸುವ ಮೂಲಕ ಆಭರಣಗಳನ್ನು ಕಾಯ್ದಿರಿಸಿಕೊಳ್ಳಬಹುದು. ಚಾಲ್ತಿಯಲ್ಲಿರುವ ಬೆಲೆ ಅಥವಾ ಕಾಯ್ದಿರಿಸಿದ ಬೆಲೆ ಇದರಲ್ಲಿ ಕಡಿಮೆ ಇರುವ ಬೆಲೆಯಲ್ಲಿ ಆಭರಣಗಳನ್ನು ಖರೀದಿಸಬಹುದು. ಅಕ್ಷಯ ತೃತೀಯದಂದು ಚಿನ್ನದ ನಾಣ್ಯಗಳ ಮೇಲೆ ಮೇಕಿಂಗ್ ಚಾರ್ಜಸ್ ಇರುವುದಿಲ್ಲ. ಅಕ್ಷಯ ತೃತೀಯದ ವಿಶೇಷ ಆಭರಣಗಳು ವಿಶೇಷ ಬೆಲೆಗಳಲ್ಲಿ ಲಭ್ಯ. ಈ ಎಲ್ಲಾ ಕೊಡುಗೆಗಳು ಮೇ 7ರವರೆಗೆ ಮಾತ್ರ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News