ದರ್ಬೆ ನೂತನ ಮಹಮ್ಮದೀಯ ಮಸೀದಿ ಉದ್ಘಾಟನೆ

Update: 2019-05-03 16:17 GMT

ಪುತ್ತೂರು: ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ಪುತ್ತೂರು ನಗರದ ದರ್ಬೆಯಲ್ಲಿ ನೂತನವಾಡಿ ನಿರ್ಮಿಸಲಾದ ದರ್ಬೆ ಮಹಮ್ಮದೀಯ ಜುಮಾ ಮಸೀದಿಯ ಉದ್ಘಾಟನೆ, ವಕ್ಫ್ ಸಮರ್ಪಣೆ ಹಾಗೂ ಜುಮಾ ಸ್ಥಾಪನಾ ಕಾರ್ಯಕ್ರಮ ಶುಕ್ರವಾರ ಮದ್ಯಾಹ್ನ ನಡೆಯಿತು. 

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಸೀದಿಯ ವಕ್ಫ್ ಸಮರ್ಪಣೆ ಮಾಡಿ, ಜುಮ್ಮಾ ಸ್ಥಾಪನೆ ಮಾಡಿದರು. ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಉದ್ಘಾಟನೆ ನೆರವೇರಿಸಿದರು.

ಸಮಸ್ತ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಮೂಡುಗೆರೆ ಖಾಝಿ ಶೈಖುನಾ ಎಂ.ಎ. ಖಾಸಿಂ ಮುಸ್ಲಿಯಾರ್ ಕಾಸರಗೋಡು ಅವರು ಖುತ್‍ಬಾ ನಿರ್ವಹಣೆಯ ನೇತೃತ್ವ ವಹಿಸಿದ್ದರು

ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ದರ್ಬೆ ಮುಹಮ್ಮದೀಯ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅಝಾದ್‍ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  

ಈ ಸಂದರ್ಭದಲ್ಲಿ ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ, ವಕ್ಫ್ ಬೋರ್ಡ್ ಸಮಿತಿಯ ಮಾಜಿ ಸದಸ್ಯ ಯುನಿಟಿ ಹಸನ್ ಹಾಜಿ, ನಗರಸಭಾ ಮಾಜಿ ಸದಸ್ಯ ಎಚ್. ಮಹಮ್ಮದ್ ಆಲಿ, ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ಯಾಕೂಬ್ ಹಾಜಿ ದರ್ಬೆ, ನೂರುದ್ದೀನ್ ಸಾಲ್ಮರ, ಹನೀಫ್ ಮಾಡಾವು, ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಸೇರಿದಂತೆ ಹಲವಾರು ಮಂದಿ ಗಣ್ಯರು ಭಾಗವಹಿಸಿದ್ದರು.

ಅಬ್ದುಲ್ ಹಮೀದ್ ಮುಸ್ಲಿಯಾರ್ ಹನೀಫಿ ಸ್ವಾಗತಿಸಿ, ವಂದಿಸಿದರು. ಅನ್ವರ್ ಸಾಧಿಕ್ ಮುಸ್ಲಿಯಾರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News