“ಆಳ್ವಾಸ್ ನ್ಯೂಸ್‍ಟೈಮ್”ಗೆ ಶತಕದ ಸಂಭ್ರಮ

Update: 2019-05-03 16:19 GMT

ಮೂಡುಬಿದಿರೆ: ಆಳ್ವಾಸ್ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಅನಾವರಣ ಗೊಳಿಸುವ ನಿಟ್ಟಿನಲ್ಲಿ “ಆಳ್ವಾಸ್ ನ್ಯೂಸ್‍ಟೈಮ್” ಎಂಬ ನ್ಯೂಸ್ ಬುಲೆಟಿನ್‍ನ್ನು ಮೂರುಜನ ವಿದ್ಯಾರ್ಥಿಗಳ ತಂಡವು ಆರಂಭಿಸಿತ್ತು. ಅಲ್ಲಿಂದ ಆರಂಭಗೊಂಡ ಈ ಪಯಣ ಸ್ನಾತಕೋತ್ತರ ವಿಭಾಗಕ್ಕೆ ವರ್ಗಾವಣೆಗೊಂಡು ಇಂದಿಗೆ ನೂರು ಸಂಚಿಕೆಯನ್ನು ಪೂರೈಸಿದ ಸಂಭ್ರಮದಲ್ಲಿದೆ.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗವು "ಆಳ್ವಾಸ್ ನ್ಯೂಸ್‍ಟೈಮ್" ಶತಕದ ಸಂಭ್ರಮವನ್ನು ಆಚರಿಸುತ್ತಿದೆ.  `ರಾಜ್ ನ್ಯೂಸ್'ನ ಮುಖ್ಯ ಸಂಪಾದಕ ಹಮೀದ್ ಪಾಳ್ಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್ ಮೋಹನ್ ಆಳ್ವ ವಹಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯಾಜೀವನ್‍ರಾಮ್ ಹಾಗೂ `ಫಸ್ಟ್ ನ್ಯೂಸ್‍ಕನ್ನಡ'ದ ರಾಜಕೀಯ ವಿಶ್ಲೇಷಕ ವಾಸುದೇವ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವು ಇದೇ 5ನೇ ತಾರೀಖು ಭಾನುವಾರದಂದು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪೂರ್ವಾಹ್ನ 10:30ಗೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಹರೇಕಳ ಹಾಜಬ್ಬರ ಜೀವನಾಧಾರಿತ ಸಾಕ್ಷ್ಯಚಿತ್ರವು ಲೋಕಾರ್ಪಣೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News