ನಾಪತ್ತೆ
Update: 2019-05-03 17:18 GMT
ಉಡುಪಿ, ಮೇ 3: ಬೆಳ್ಳೆ ಗ್ರಾಮದ ಮೂಡುಬೆಳ್ಳೆ ಪೊಯ್ಯದಪಾಡಿಯ ಅಲ್ಪೋನ್ಸಾ ಆಳ್ವ (55) ಎಂಬವರು ಎ.28ರಂದು ಪೊಯ್ಯದಪಾಡಿಯಿಂದ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ಕನ್ನಡ, ಹಿಂದಿ, ಇಂಗ್ಲಿಷ್, ತುಳು, ಕೊಂಕಣಿ ಭಾಷೆ ಬಲ್ಲವರಾಗಿದ್ದಾರೆ.
ಯಾರಿಗಾದರೂ ಇವರು ಸಿಕ್ಕಿದಲ್ಲಿ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರು (08258-231333/9480805421), ಕಾಪು ಪೊಲೀಸ್ ವೃತ್ತ ನಿರೀಕ್ಷಕರು (0820-2552133/9480805431), ಶಿರ್ವ ಪೊಲೀಸ್ ಠಾಣೆ (0820-2554139/9480805451) ಸಂಪರ್ಕಿಸುವಂತೆ ಶಿರ್ವಾ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.