ಜೆಪ್ಪು ಮಾರ್ನಮಿಕಟ್ಟೆ ಅಲ್-ಸಾದ್‌ವೆಲ್ಫೇರ್ ಅಸೋಸಿಯೇಶನ್ ಉದ್ಘಾಟನೆ

Update: 2019-05-03 17:43 GMT

ಮಂಗಳೂರು, ಮೇ 3: ಜೆಪ್ಪು ಮಾರ್ನಮಿಕಟ್ಟೆಯ ಅಲ್-ಸಾದ್ ವೆಲ್ಫೇರ್ ಅಸೋಸಿಯೇಶನ್ ನ್ನು ಎಂಜೆಎಂ ಚೊಕ್ಕಬೆಟ್ಟುವಿನ ಮುದರಿಸ್ ಯು.ಕೆ.ಅಝೀಝ್ ದಾರಿಮಿಯವರು ದುವಾದೊಂದಿಗೆ ಶುಭ ಹಾರೈಸಿ ನಗರದ ವೇಲೆನ್ಸಿಯಾ ಮರಿಯ ಹಾಲ್‌ನಲ್ಲಿಂದು ಉದ್ಘಾಟಿಸಿದರು.

ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಿಪ್ಟ್ ಕಾಲೇಜು ನಿರ್ದೇಶಕ ಎಂ.ಜಿ.ಹೆಗ್ಡೆ, ಮಂಗಳೂರು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರದಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಂಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆ, ಮಾಜಿ ಮಾನಪಾ ಸದಸ್ಯೆ ಅಪ್ಪಿ, ‘ವಾರ್ತಾಭಾರತಿ’ ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್, ಅನಿವಾಸಿ ಉದ್ಯಮಿ ವಿ.ಎಂ. ಮುನವ್ವರ್, ಉದ್ಯಮಿ ಬಿ.ಎಸ್.ಬಶೀರ್ ಹಾಜಿ, ಎಂ.ಪಿ. ಅಬೂಬಕ್ಕರ್ ಬೋಳಾರ್, ಜೆಪ್ಪು ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಹುಸೇನ್, ಜೆಪ್ಪು ಕುಡುಪಾಡಿ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಹಸನಬ್ಬ, ಬೋಳಾರ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಮುಹಮ್ಮದ್ ಮುಸ್ತಾಫ ಬೋಳಾರ, ಝಹೀರ್, ಅಲ್-ಸಾದ್ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಮುಹಮ್ಮದ್ ಇಸ್ರಾನ್ ಮೊದಲಾದವರು ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಕರ್ತರಾದ ಮೋಂತು ಲೋಬೊ, ಅಬ್ದುಲ್ಲಾ ಅವರನ್ನು ಸನ್ಮಾನಿಸಲಾಯಿತು. ರೋಹಿತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News