ಪರಿಯಾಲ್ತಡ್ಕ: ಬ್ಲಿಝ್ ಲಂಡನ್ ಪ್ರೀಸ್ಕೂಲ್ ನಲ್ಲಿ ರಕ್ಷಕರಿಗೆ ತರಬೇತಿ ಶಿಬಿರ
ಪುತ್ತೂರು, ಮೇ 4: ಮಕ್ಕಳ ಉತ್ತಮ ಬೆಳವಣಿಗೆಗಾಗಿ ಅವರಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಮನಃಶಾಸ್ತ್ರಜ್ಞ ಡಾ.ಜೆ.ಪಿ.ಐಸಕ್ ಹೇಳಿದ್ದಾರೆ.
ಅವರು ಪರಿಯಾಲ್ತಡ್ಕ ಬ್ಲಿಝ್ ಲಂಡನ್ ಪ್ರೀಸ್ಕೂಲ್ ನಲ್ಲಿ ರಕ್ಷಕರಿಗಾಗಿ ಆಯೋಜಿಸಿದ ಸಕ್ಸೆಸ್ಫುಲ್ ಪ್ಯಾರೆಂಟಿಗ್ ಕಾರ್ಯಕ್ರಮದಲ್ಲಿ ಮುಖ್ಯ ತರಬೇತುದಾರರಾಗಿ ಮಾತನಾಡುತ್ತಿದ್ದರು.
ಮಗು ಬೆಳೆಯುವ ಪರಿಸರ ಶುದ್ಧವಾಗಿರಬೇಕು, ಅವರ ಸಣ್ಣಪುಟ್ಟ ಒಳ್ಳೆಯ ಕಾರ್ಯಗಳಿಗೂ ನಾವು ಪ್ರೋತ್ಸಾಹ ನೀಡಬೇಕು. ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳ ಅತ್ಯಧಿಕ ಉಪಯೋಗದಿಂದಾಗಿ ಮಕ್ಕಳಲ್ಲಿ ಮಾನಸಿಕ ಖಿನ್ನತೆ, ಹಾಗೂ ಹಲವಾರು ರೋಗಗಳು ಬರುತ್ತಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮನಃಶಾಸ್ತ್ರಜ್ಞ ಅನ್ಸಾರ್ ಬೆಂಗಳೂರು, ಖಾಲಿ ಪಾತ್ರೆಯಂತಿರುವ ಮಕ್ಕಳ ಮನಸ್ಸಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದನ್ನು ಬಿತ್ತುವುದರಲ್ಲಿ ರಕ್ಷಕರ ಪಾತ್ರ ಹಿರಿದು ಎಂದರು.
ಬ್ಲಿಝ್ ಲಂಡನ್ ಪ್ರೀಸ್ಕೂಲ್ ನ ತರಬೇತುದಾರ ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಮಾತನಾಡಿ ಬ್ಲಿಝ್ ಲಂಡನ್ ಪ್ರೀಸ್ಕೂಲ್ ಬಗ್ಗೆ ವಿವರಣೆ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ರಝಾ ಅಮ್ಜದಿ ಮಾಡಾವು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯ ಎಂ.ಎಸ್.ಮುಹಮ್ಮದ್, ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾವಣೆ ತರಬೇಕು ಎಂದರು.
ವೇದಿಕೆಯಲ್ಲಿ ಉಜ್ರುಪಾದೆ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ನಾಟೆಕಲ್, ಕುಕ್ಕೆಬೆಟ್ಟು ಮಸ್ಜಿದ್ ಅಧ್ಯಕ್ಷ ಇಬ್ರಾಹೀಂ ಹಾಜಿ ಕೇಪು, ಸಾಜ ಜುಮಾ ಮಸ್ಜಿದ್ ಅಧ್ಯಕ್ಷ ಎಸ್.ಕೆ.ಇಬ್ರಾಹೀಂ, ಪರಿಯಾಲ್ತಡ್ಕ ಜುಮಾ ಮಸ್ಜಿದ್ ಕೋಶಾಧಿಕಾರಿ ಮಹ್ಮೂದ್ ಕುಟ್ಟಿತಡ್ಕ, ಅಬ್ದುಲ್ಲಾ ಹಾಜಿ ಕುಟ್ಟಿತಡ್ಕ, ಇಬ್ರಾಹೀಂ ಹಾಜಿ ಮನಿಲ, ಮಾಮು ಹಾಜಿ ನೀರ್ಕಜೆ,
ಎಂ.ಎಸ್.ಅಬ್ದುಲ್ ಕುಂಞಿ, ಅಬ್ದುರ್ರಝಾಕ್ ಹಾಜಿ ಮಣಿಲ, ಕಮರುದ್ದೀನ್ ಪರಿಯಾಲ್ತಡ್ಕ, ಸಿರಾಜುದ್ದೀನ್ ಮಣಿಲ,ರಝಾಕ್ ಗರಡಿ, ಹನೀಫ್ ಸಿಟಿ ಮೊಬೈಲ್ ಪರಿಯಾಲ್ತಡ್ಕ, ಹಮೀದ್ ಕಟ್ಟೆ,ಬಂದ್ಯೋಡು ಉಪಸ್ಥಿತರಿದ್ದರು.
ಶಾಫಿ ಮಾಳಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.