ತೋಟಗಾರಿಕೆ ಇಲಾಖೆ: ಸಹಾಯಧನಕ್ಕೆ ಅರ್ಜಿ ಆಹ್ವಾನ

Update: 2019-05-04 12:52 GMT

ಉಡುಪಿ, ಮೇ 4: 2019-20ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ಯಿಂದ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆ ಗಳಡಿ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗೇರು, ತೆಂಗು, ಕಾಳುಮೆಣಸು, ಅನಾನಸು, ಬಾಳೆ, ಕೊಕ್ಕೋ, ಮ್ಯಾಂಗೋ ಸ್ಟೀನ್, ರಾಂಬುಟಾನ ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ ಲ್ಯವಿದೆ. ತೋಟಗಾರಿಕಾ ಬೆಳೆಗಳಲ್ಲಿ ರೋಗ/ಕೀಟಗಳ ನಿಯಂತ್ರಣಕ್ಕೆ ಖರೀದಿಸಿದ ಸಸ್ಯ ಸಂರಕ್ಷಣಾ ಔಷಧಿಗಳಿಗೆ, ಸಸ್ಯ ಪೋಷಕಾಂಶಗಳಿಗೆ ಗೇರು, ತೆಂಗು ಹಾಗೂ ಕಾಳುಮೆಣಸು ಹಳೆ ತೋಟಗಳ ಪುನಶ್ಚೇತನಕ್ಕೆ, ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ, ಹಸಿರುಮನೆ, ನೆರಳು ಪರದೆ ನಿರ್ಮಾಣಕ್ಕಾಗಿ ಸಣ್ಣ ಪ್ರಮಾಣದ ಸಸ್ಯಾಗಾರ ಸ್ಥಾಪನೆಗೆ, ತೆಂಗಿನಲ್ಲಿ ರೋಗ/ಕೀಟ ನಿಯಂತ್ರಣಕ್ಕಾಗಿ ಪರಿಕರಗಳ ಖರೀದಿಗೆ, ಜೇನು ಕೃಷಿ ತರಬೇತಿಯೊಂದಿಗೆ, ಜೇನುಪೆಟ್ಟಿಗೆ, ಜೇನು ತೆಗೆಯುವ ಯಂತ್ರಗಳ ಖರೀದಿಗೆ ಹಾಗೂ ಮಧುವನಗ ಸ್ಥಾಪನೆಗೆ ಸಹಾಯಧನ ಲಭ್ಯವಿದೆ.

ತೋಟಗಾರಿಕೆಯಲ್ಲಿ ಬಳಸುವ ಯಂತ್ರಗಳ ಖರೀದಿಗೆ 20ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಟ್ರಾಕ್ಟರ್ ಖರೀದಿಗೆ, ಪ್ಯಾಕ್ ಹೌಸ್ ಹಾಗೂ ಪ್ರಾಥಮಿಕ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೂ ಸಹಾಯಧನ ಲ್ಯವಿದೆ. ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ, ತುಂತುರು ನೀರಾವರಿ, ಮೈಕ್ರೋ ಸ್ಪ್ರಿಂಕ್ಲರ್, ಮಿನಿ ಸ್ಪ್ರಿಂಕ್ಲ್ ಅಳವಡಿಕೆಗೆ ಸಹಾಯಧನ ಸಿಗಲಿದೆ.

ನಗರ ವ್ಯಾಪ್ತಿಯ ಆಸಕ್ತರಿಂದ ತಾರಸಿ ಕೈತೋಟ ತರಬೇತಿ ಹಾಗೂ ಮಿನಿಕಿಟ್‌ಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಅಲ್ಲದೆ ವಿವಿಧ ತರಬೇತಿ ಕಾರ್ಯಕ್ರಮಗಳು, ಪ್ರವಾಸ ಕಾರ್ಯಕ್ರಮಗಳನ್ನು ಇಲಾಖೆ ಆಯೋಜಿಸಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಾರ್ಗಸೂಚಿಗುಗುಣವಾಗಿ ಸಹಾಯಧನ ದೊರಕಲಿದೆ.

ಆಸಕ್ತ ರೈತರು ಪಹಣಿ, ಆಧಾರ್ ಪ್ರತಿ, ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜಾತಿ ಪ್ರಮಾಣ ಪತ್ರ (ಪ.ಜಾತಿ/ಪಂಗಡ) ಹಾಗೂ ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪತ್ರದೊಂದಿಗೆ ಸಲ್ಲಿಸಬಹುದು ಎಂದು ಜಿಪಂನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News