ವಿಭಾಲಿ ಶೆಟ್ಟಿಗೆ ಶಾರ್ಜಾ ಶಿಕ್ಷಣ ಪ್ರಶಸ್ತಿ ಪ್ರದಾನ

Update: 2019-05-04 15:18 GMT

ಉಡುಪಿ, ಮೇ 4: ಶಾರ್ಜಾ ಅವರ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ 9ನೆ ತರಗತಿಯ ವಿದ್ಯಾರ್ಥಿನಿ ವಿಭಾಲಿ ಶೆಟ್ಟಿ 2018-19ನೆ ಸಾಲಿನ ‘ಶಾರ್ಜಾ ಅವಾರ್ಡ್ ಫಾರ್ ಎಕ್ಸೆಲೆನ್ಸ್ ಇನ್ ಏಜ್ಯುಕೇಶನ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮೇ 1ರಂದು ಶಾರ್ಜಾದ ಅಲ್ ಜವಹರ್ ರೆಸೆಪ್ಶನ್ ಆ್ಯಂಡ್ ಕನ್‌ವೆಂಶನ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಶಾರ್ಜಾದ ಯುವರಾಜ ಹಾಗೂ ಉಪ ಆಡಳಿತಗಾರ ಶೇಕ್ ಸುಹನ್ ಬಿನ್ ಮುಹಮ್ಮದ್ ಬಿನ ಸುಲ್ತಾನ್ ಅಲ್ ಖಾಸ್ಮಿ ಪ್ರಶಸ್ತಿ ಪ್ರದಾನ ಮಾಡಿದರು.

ದೇಶದ ಪ್ರಾಂತಗಳಿಂದ ಆಯ್ಕೆ ಹೊಂದಿರುವ ವಿವಿಧ ದೇಶಗಳ ವಿದ್ಯಾರ್ಥಿ ಗಳ ಅಂತಿಮ ಸುತ್ತಿನಲ್ಲಿ ವಿಭಾಲಿ ಶೆಟ್ಟಿ ಆಯ್ಕೆಯಾದರು. ದೇಶದ ಪ್ರತಿಷ್ಠಿತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.

ಕಳೆದ ವಿಭಾಲಿ ಶೆಟ್ಟಿ ಯುಎಇಯ ರಾಷ್ಟ್ರೀಯ ಪ್ರತಿಷ್ಠಿತ ಶೇಕ್ ಹಮದಾನ್ ಪ್ರಶಸ್ತಿಯನ್ನು ಪಡೆದಿದ್ದರು. ಇವರು ಶಾರ್ಜಾದ ಉದ್ಯಮಿ ಪ್ರಸಾದ್ ಶೆಟ್ಟಿ ಹಾಗೂ ಅರ್ಕಿಟೆಕ್ಟ್ ಸುರಕ್ಷಾ ಪ್ರಸಾದ್ ಶೆಟ್ಟಿ ದಂಪತಿ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News