ಕಸ ವಿಲೇವಾರಿ ವ್ಯವಸ್ಥೆಗೆ ನಿಟ್ಟೆ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ
Update: 2019-05-04 15:19 GMT
ಶಿರ್ವ, ಮೇ 4: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ಪ್ರೋಟೋಟೈಪ್ ವೇಸ್ಟ್ ಸ್ಯಾಗ್ರಿಗೇಟರ್ ಯಂತ್ರವು ನಿಟ್ಟೆ ತಾಂತ್ರಿಕ ವಿದ್ಯಾ ಲಯದ ಪ್ರೊಜೆಕ್ಟ್ ಎಕ್ಸ್‌ಪ್ರೊ- 2019 ಪ್ರದರ್ಶನ ಸ್ಪರ್ಧೆಯಲ್ಲಿ ದ್ವೀತಿಯ ಬಹುಮಾನವನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳಾದ ರಾಹುಲ್ ಆರ್.ಪೈ, ಪವನ್ ಜೆ.ಬಂಗೇರ, ಪ್ರಜ್ವಲ್ ಪಿ. ಮತ್ತು ಮಹಮ್ಮದ್ ಮುಬೀನ್ ಶೇಖ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರಶ್ಮಿ ಪಿ.ಶೆಟ್ಟಿ ಮಾರ್ಗದರ್ಶನದಲ್ಲಿ ಈ ಯಂತ್ರವನ್ನು ತಯಾರಿಸಿದ್ದಾರೆ. ಈ ಯೋಜನೆಗೆ ನಂದಿಕೂರು ಕೈಗಾರಿಕಾ ವಲಯದ ಸ್ಟೀಲ್ ಪ್ಲಾನೆಟ್ ಕಂಪನಿಯ ಆಡಳಿತ ಪಾಲುದಾರರಾದ ಕವನ್ ಕುಮಾರ್ ಮತ್ತು ಪ್ರವೀಣ್ ಬಿ. ಸಹಯೋಗ ನೀಡಿದ್ದಾರೆ.
ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಮುಖ್ಯ ಸಮಸ್ಯೆಯಾಗಿರುವ ಕಸ ವಿಲೇವಾರಿ ವ್ಯವಸ್ಥೆಗೆ ಈ ಯಂತ್ರವು ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡಲಿದೆ ಎಂದು ಸಾಧಕ ವಿದ್ಯಾರ್ಥಿಗಳು ತಿಳಿಸಿದ್ದಾರೆ.