ಅಬ್ದುಲ್ ಖಾದರ್ ಹಾಜಿ ಗೋಳ್ತಮಜಲು ಸಂತಾಪ ಸಭೆ

Update: 2019-05-04 16:49 GMT

ಮಂಗಳೂರು, ಮೇ 4: ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ, ಉದ್ಯಮಿ ಅಬ್ದುಲ್ ಖಾದರ್ ಹಾಜಿ ಗೋಳ್ತಮಜಲು ಅವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಸಂತಾಪ ಸೂಚಕ ಸಭೆ ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಅಬ್ದುಲ್ ರಝಾಕ್ ಅನಂತಾಡಿ ನುಡಿನಮನ ಸಲ್ಲಿಸಿ, ರಹೀಮ್ ಟೀಕೆ ಮತ್ತು ಅಬ್ದುಲ್ ಖಾದರ್ ಹಾಜಿ ಅವರನ್ನು ಬ್ಯಾರಿ ಸಮುದಾಯ ಕಳೆದುಕೊಂಡಿದೆ. 1997ರ ಬ್ಯಾರಿ ಆಂದೋಲನದಲ್ಲಿ ಆರಂಭಿಸಿದಾಗ ಬಿ.ಎಂ. ಇದಿನಬ್ಬ ಅಧ್ಯಕ್ಷತೆ ವಹಿಸಿದ್ದರು. ಮುಂದಿನ ಬಂಟ್ವಾಳ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಮುಂದಿನ ನಾಲ್ಕು ಸಮ್ಮೇಳನಕ್ಕೂ ಸಾಕ್ಷಿಯಾಗಿದ್ದರು ಎಂದು ಹೇಳಿದರು.

ಕಲ್ಲಡ್ಕದಲ್ಲಿ ಹುಟ್ಟಿ ಮೆಟ್ರಿಕ್ಯುಲೇಶನ್ ಉತ್ತೀರ್ಣರಾಗಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬಾಲಕನಾಗಿ ದೇಶದ ಪರ ಘೋಷಣೆ ಕೂಗಿದ್ದರು. ಧಾರ್ಮಿಕ, ಶಿಕ್ಷಣ, ಸಮಾಜಸೇವೆ, ಕೃಷಿ, ಕ್ರೀಡೆ, ಉದ್ಯಮ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದವರು ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.

ಅಹ್ಮದ್ ಯೂಸುಫ್, ಉಪನ್ಯಾಸಕ ಮುಹಮ್ಮದ್ ಹನೀಫ್ ಗೋಳ್ತಮಜಲು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪಕುಮಾರ್ ಎಸ್. ಕಲ್ಕೂರ, ಮಾಜಿ ಮೇಯರ್ ಕೆ.ಅಶ್ರಫ್, ಉಮರಬ್ಬ, ಕೇಂದ್ರ ಬ್ಯಾರಿ ಪರಿಷತ್ ಅಧ್ಯಕ್ಷ ಡಿ.ಎಂ.ಅಸ್ಲಮ್, ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಮಾಜಿ ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿದ್ದರು.

ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ಹುಸೈನ್ ಕಾಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News