ತೋಡಾರು ಯೆನೆಪೋಯ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ
ಮೂಡುಬಿದಿರೆ : ಜಗತ್ತು ಇದೀಗ ನಾಲ್ಕನೇ ಕೈಗಾರಿಕ್ರಾಂತಿಯಲ್ಲಿದ್ದು ಆಟೊಮಿಷಿನ್ ಯುಗದಲ್ಲಿದ್ದೇವೆ .ಇಲ್ಲಿ ನಾವು ಸಾಂಪ್ರದಾಯಕ ಕಲಿಕೆಗೆ ಮೀಸಲಾಗದೆ ಅಂತರ್ವಿಭಾಗಿಯ ವಿಷಯಗಳಾದ ಐಟಿಒ, ಎಐ, ಕ್ಲೌಡ್ ಕಂಪ್ಯೂಟಿಂಗ್ ಇತ್ಯಾದಿ ಕಲಿಕೆಯ ಕಡೆಗೆ ಮುಖ ಮಾಡಬೇಕಾಗಿದೆ ಎಂದು ಎ.ಎಂ.ಖಾನ್ ಹೇಳಿದರು.
ಅವರು ತೋಡಾರಿನಲ್ಲಿರುವ ಯೆನೆಪೋಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ನಡೆದ ಇಲೆಕ್ಟ್ರಿಕಲ್ ಸೈನ್ಸ್ ಮತ್ತು ಇನ್‍ಫೋರ್ಮೇಶನ್ ಮತ್ತು ಟೆಕ್ನಾಲಜಿಯಲ್ಲಿ ಇತ್ತೀಚಿನ ಆಶಯಗಳು ಹಾಗೂ “ಮೆಕ್ಯಾನಿಕಲ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಇತ್ತೀಚಿನ ಸುಧಾರಣೆಗಳು “ ಎಂಬ ವಿಷಯಗಳ ಕುರಿತು ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ ಆರ್. ವಿ. ಡಿ’ಸೋಜಾ ವಹಿಸಿದ್ದರು. ಸಂಸ್ಥೆಯ ಅಬ್ದುಲ್ಲಾ ಜಾವೇದ್ ಮಾತನಾಡಿ ಸಂಸ್ಥೆ ಇಂಥ ಅನೇಕ ಅವಕಾಶಗಳನ್ನು ನೀಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಡಾ. ಸತೀಶ್ ಎನ್ ಮತ್ತು ಡಾ. ಜೀವನ್ ಪಿಂಟೋ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ವಿಜಯ್ ಕುಮಾರ್ ನಿರೂಪಣೆ ವಹಿಸಿದ್ದರು.