ಪಾಲಿಟೆಕ್ನಿಕ್ ಡಿಪ್ಲೋಮಾ ಪ್ರವೇಶ ಆರಂಭ
Update: 2019-05-04 16:56 GMT
ಮಂಗಳೂರು, ಮೇ 4: ಕರ್ನಾಟಕ ಸರಕಾರಿ (ಸಂಜೆ) ಪಾಲಿಟೆಕ್ನಿಕ್ ಮಂಗಳೂರು ಕಾಲೇಜಿಗೆ 2019-20ನೇ ಸಾಲಿನ ಪ್ರಥಮ ವರ್ಷದ ಸಂಜೆ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ ವರ್ಷದ ಸಂಜೆ ಡಿಪ್ಲೋಮಾ ಪ್ರವೇಶ ಬಯಸುವ ಅಭ್ಯರ್ಥಿಗಳು ಮೇ 18ರವರೆಗೆ ಅರ್ಜಿ ನಮೂನೆ ಹಾಗೂ ಮಾಹಿತಿ ಪುಸ್ತಕವನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ www.dte.kar.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ದಾಖಲೆ ಹಾಗೂ ನಗದು ರೂಪದಲ್ಲಿ ಅರ್ಜಿ ಶುಲ್ಕದೊಂದಿಗೆ ಮೇ 18ರ ಸಂಜೆ 5 ಗಂಟೆಗೊಳಗೆ ಮಂಗಳೂರಿನ ಕದ್ರಿಹಿಲ್ಸ್‌ನ ಕರ್ನಾಟಕ ಸರಕಾರಿ (ಸಂಜೆ) ಪಾಲಿಟೆಕ್ನಿಕ್‌ನ ಸ್ಪೇಷಲ್ ಆಫೀಸರ್ ಅವರಿಗೆ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪಾಲಿಟೆಕ್ನಿಕ್‌ನ ಕಚೇರಿ ದೂ.ಸಂ.: 0824- 2211636ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.