ನಾಲ್ಕು ಟಿವಿ ಚಾನೆಲ್‌ಗಳಲ್ಲಿ ‘ರಮಝಾನ್ ಸಿಲ್‌ಸಿಲಾ’

Update: 2019-05-05 07:56 GMT

ಮಂಗಳೂರು, ಮೇ 5: ಸಿಲ್‌ಸಿಲಾ ಮೀಡಿಯ ವತಿಯಿಂದ ರೀಡ್ ಪ್ಲಸ್ ಮತ್ತು ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಸಹಯೋಗದಲ್ಲಿ 12 ವರ್ಷದ ರಮಝಾನ್ ವಿಶೇಷ ಕಾರ್ಯಕ್ರಮಗಳು ಈ ಬಾರಿ ನಾಲ್ಕು ಟಿವಿ ಚಾನೆಲ್‌ಗಳಲ್ಲಿ ಹಾಗೂ ಸಿಲ್‌ಸಿಲಾ ಮೀಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿವೆ.

‘ವಿ4 ನ್ಯೂಸ್’ನಲ್ಲಿ ‘ರಮಝಾನ್ ಸಿಲ್‌ಸಿಲಾ’ ಕಾರ್ಯಕ್ರಮವು ಪ್ರತಿ ರಾತ್ರಿ 10ರಿಂದ 10:45ರ ತನಕ ಪ್ರಸಾರಗೊಳ್ಳಲಿದೆ. ಅಪರಾಹ್ನ 2:45ರಿಂದ 3:30ರವರೆಗೆ ಮರು ಪ್ರಸಾರಗೊಳ್ಳಲಿದೆ. ಬೆಳಗ್ಗೆ 9:30ರಿಂದ 10:30ರವರೆಗೆ ಪೇರೋಡ್ ಉಸ್ತಾದ್‌ರ ಆಧ್ಯಾತ್ಮಿಕ ತರಗತಿ ಪ್ರಸಾರವಾಗಲಿದೆ.

‘ದಾಯ್ಜಿವರ್ಲ್ಡ್’ ಚಾನೆಲ್‌ನಲ್ಲಿ ಪ್ರತಿದಿನ ಸಂಜೆ 4:30ರಿಂದ 5ರ ತನಕ ‘ರಮಝಾನ್ ಬಯಾನ್’ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಬೆಳಗ್ಗೆ 8:30ರಿಂದ 9:30ರ ತನಕ ವಿಶೇಷ ತರಗತಿ ಪ್ರಸಾರವಾಗೊಳ್ಳಲಿದೆ.

‘ಅಬ್ಬಕ್ಕ’ ಚಾನೆಲ್‌ನಲ್ಲಿ ‘ರಮಝಾನ್ ವಾಯ್ಸ್’ ಕಾರ್ಯಕ್ರಮ ಪ್ರತೀದಿನ ಬೆಳಗ್ಗೆ 10:30ರಿಂದ 11:30ರ ತನಕ ಪ್ರಸಾರಗೊಳ್ಳಲಿದೆ. ರಾತ್ರಿ 7:15ರಿಂದ 8:15ರ ತನಕ ಮರು ಪ್ರಸಾರಗೊಳ್ಳಲಿದೆ.

‘ಪೊಸ ಕುರಲ್’ ಚಾನೆಲ್‌ನಲ್ಲಿ ‘ರಮಝಾನ್ ವೀವ್’ ಕಾರ್ಯಕ್ರಮ ಪ್ರತೀದಿನ ಪೂರ್ವಾಹ್ನ 11:30ರಿಂದ 12:30ರ ತನಕ ಪ್ರಸಾರಗೊಳ್ಳಲಿದೆ. ರಾತ್ರಿ 10ರಿಂದ 11ರ ತನಕ ಮರುಪ್ರಸಾರಗೊಳ್ಳಲಿದೆ.

ಈ ಕಾರ್ಯಕ್ರಮಗಳಲ್ಲಿ ಎ.ಪಿ.ಉಸ್ತಾದ್, ಪೇರೋಡ್ ಉಸ್ತಾದ್, ಖಾಝಿ ಬೇಕಲ್ ಉಸ್ತಾದ್, ಫಾರೂಕ್ ನಈಮಿ ಕೊಲ್ಲಂ, ಅಬು ಸುಫ್ಯಾನ್, ಡಾ.ಎಮ್ಮೆಸ್ಸೆಂ ಝೈನಿ, ಜಿಎಂ ಸಖಾಫಿ, ಕಾವಳಕಟ್ಟೆ ಹಝ್ರತ್, ಶಾಫಿ ಸಅದಿ, ವಳವೂರು ಉಸ್ತಾದ್ ಮತ್ತಿತರರು ಭಾಗವಹಿಸುವರು ಎಂದು ಕಾರ್ಯಕ್ರಮದ ನಿರ್ದೇಶಕ ಪಿ.ಎಸ್.ಮುಹಮ್ಮದ್ ಸಖಾಫಿ ಅಲ್ ಕಾಮಿಲ್ ಪಾಣೆಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News