ಕಾಂಗ್ರೆಸ್ ಮುಖಂಡ ಸಂಜೀವ ಮೊಯ್ಲಿ ನಿಧನ
Update: 2019-05-05 08:26 GMT
ಮಂಗಳೂರು, ಮೇ 5: ಕಾಂಗ್ರೆಸ್ ಮುಖಂಡ, ಮೂಡುಬಿದಿರೆ ನಿವಾಸಿಯಾಗಿದ್ದ ಸಂಜೀವ ಮೊಯ್ಲಿ(69) ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಅವರು, ಕೆಪಿಸಿಸಿ ಸದಸ್ಯರಾಗಿ, ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ಮೂಡುಬಿದಿರೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ಸಂತಾಪ: ಸಂಜೀವ ಮೊಯ್ಲಿಯವರ ನಿಧನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡರಾದ ಎಂ.ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ, ಬಿ.ರಮಾನಾಥ ರೈ, ಯು.ಟಿ.ಖಾದರ್, ಐವನ್ ಡಿಸೋಜ, ಹರೀಶ್ ಕುಮಾರ್, ಜೆ.ಆರ್.ಲೋಬೊ ಮೊದಲಾದವರು ಸಂತಾಪ ಸೂಚಿಸಿದ್ದಾರೆ.