ಬೋಟು ಅವಘಡ: ಸಮಗ್ರ ತನಿಖೆಗೆ ಜೆಡಿಎಸ್‌ಯಿಂದ ಸಿಎಂಗೆ ಮನವಿ

Update: 2019-05-05 13:43 GMT

ಉಡುಪಿ, ಮೇ 5: ನಾಲ್ಕು ತಿಂಗಳ ಹಿಂದೆ ನಾಪತ್ತೆಯಾದ ಏಳು ಮಂದಿ ಮೀನುಗಾರರ ಸಹಿತ ಸುವರ್ಣ ತ್ರಿಭುಜ ಬೋಟ್ನ ಅವಘಡಕ್ಕೆ ನೈಜ್ಯ ಕಾರಣ ಏನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಮುಖ್ಯ ಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರಧನ, ಮೀನುಗಾರರ ಕುಟುಂಬಗಳು ಆರ್ಥಿಕವಾಗಿ ಸಧೃಡವಾಗಲು ವಿಶೇಷ ಪ್ಯಾಕೇಜ್ ಹಾಗೂ ಮೀನುಗಾರ ಮಹಿಳೆಯರ ಸಾಲ ಮನ್ನಾ ಮಾಡಬೇಕು ಎಂದು ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿನ ಮರಳು ಸಮಸ್ಯೆಯನ್ನು ಜಿಲ್ಲಾಧ್ಯಕ್ಷರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಯುವ ಮೂಲಕ ಶ್ರೀಘ್ರವಾಗಿ ಮರಳು ದೊರೆಯುವಂತೆ ಮಾಡಬೇಕು ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡು ವಲ್ಲಿ ಸೂಕ್ತ ಅನುದಾನ ನೀಡಬೇಕು. ಉಡುಪಿ ಜಿಲ್ಲೆಗೆ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕೆಂದು ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ವೀಕ್ಷಕ ಸುಧಾಕರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಇಸ್ಮಾಯಿಲ್ ಪಲಿಮಾರ್, ಮಹ್ಮಮದ್ ರಫೀಕ್, ರವಿರಾಜ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News