ಕಲಾವಿದ ಮಾನ್ಯ ತಿಮ್ಮಯ್ಯರಿಗೆ ಗೌರವಾರ್ಪಣೆ

Update: 2019-05-05 13:46 GMT

ಉಡುಪಿ, ಮೇ 5: ತೆಂಕುತಿಟ್ಟಿನ ಪ್ರತಿಭಾನ್ವಿತ ಕಲಾವಿದರಾಗಿ, ಮೇಳದ ಯಜಮಾನರಾಗಿ 5 ದಶಕಗಳ ಕಲಾಸೇವೆಗೈದ ಮಾನ್ಯ ತಿಮ್ಮಯ್ಯ ಅವರನ್ನು ಕಾಸರಗೋಡಿನ ಮಾನ್ಯದಲ್ಲಿರುವ ಅವರ ಮನೆಯಲ್ಲಿ ಯಕ್ಷಗಾನ ಕಲಾಂಗದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಕೆ.ಮನೋಹರ್, ಸದಸ್ಯರಾದ ಕೆ.ಆನಂದ ಶೆಟ್ಟಿ, ಕಲಾವಿದ ತಾರನಾಥ ವರ್ಕಾಡಿ, ಮಾನ್ಯರ ಅಳಿಯ ನಾರಾಯಣ ಮೊದಲಾದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News