ಉಡುಪಿಯಲ್ಲಿ ನೀಟ್ ಪರೀಕ್ಷೆ ಬರೆದ 2673 ವಿದ್ಯಾರ್ಥಿಗಳು
ಉಡುಪಿ, ಮೇ 5: ಉಡುಪಿ ಜಿಲ್ಲೆಯ ಐದು ಕೇಂದ್ರಗಳಲ್ಲಿ ರವಿವಾರ ನಡೆದ ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ನೀಟ್ ಪರೀಕ್ಷೆಯನ್ನು ಒಟ್ಟು 2673 ವಿದ್ಯಾರ್ಥಿಗಳು ಬರೆದಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಕನ್ನರ್ಪಾಡಿಯ ಸೈಂಟ್ ಮೇರಿಸ್ ಶಾಲೆ, ಮಣಿಪಾಲದ ಮಾಧವ ಕೃಪಾ ಶಾಲೆ, ಬ್ರಹ್ಮಾವರದ ಲಿಟ್ಲ್‌ರಾಕ್ ಹಾಗೂ ಜಿಎಂ ವಿದ್ಯಾನಿಕೇತನ ಶಾಲೆಗಳಲ್ಲಿರುವ ನೀಟ್ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ನೊಂದಾಣಿ ಮಾಡಿಕೊಂಡಿರುವ ಒಟ್ಟು 2984 ವಿದ್ಯಾರ್ಥಿಗಳ ಪೈಕಿ 311 ಮಂದಿ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಪೂರ್ಣಪ್ರಜ್ಞ ಕೇಂದ್ರದಲ್ಲಿ 284ರಲ್ಲಿ 250 ಹಾಜರು, 34 ಗೈರು, ಸೈಂಟ್ ಮೇರಿಸ್‌ನಲ್ಲಿ 600ರಲ್ಲಿ 536 ಹಾಜರು, 64 ಗೈರು, ಮಾಧವ ಕೃಪಾದಲ್ಲಿ 780ರಲ್ಲಿ 699 ಹಾಜರು, 81 ಗೈರು, ಬ್ರಹ್ಮಾವರದ ಲಿಟ್ಲ್‌ರಾಕ್‌ನಲ್ಲಿ 600ರಲ್ಲಿ 539 ಹಾಜರು, 61 ಗೈರು, ಜಿಎಂ ವಿದ್ಯಾನಿಕೇತನದಲ್ಲಿ 720ರಲ್ಲಿ 649 ಹಾಜರು, 71 ಗೈರಾಗಿದ್ದಾರೆ ಎಂದು ನೀಟ್ ಪರೀಕ್ಷೆಯ ಉಡುಪಿ ನಗರ ಸಂಯೋಜಕಿ ವಾರ್ಟೆಲ್ ಎಲ್.ಎಫ್.ಲೆವೀಸ್ ತಿಳಿಸಿದ್ದಾರೆ.