ಸುವರ್ಣ ತ್ರಿಭುಜ ಬೋಟು ಅವಘಡ: ಕುಟುಂಬಗಳಿಗೆ ಪರಿಹಾರಕ್ಕೆ ಇಲಾಖಾಧಿಕಾರಿಗಳಿಂದ ಸಿದ್ಧತೆ

Update: 2019-05-05 16:05 GMT

ಮಲ್ಪೆ, ಮೇ 5: ಏಳು ಮಂದಿ ಮೀನುಗಾರರ ಸಹಿತ ನಾಪತ್ತೆಯಾಗಿದ್ದ ಸುವರ್ಮ ತ್ರಿಭುಜ ಬೋಟಿನ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆ ಯಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಉಡುಪಿಯ ಮೀನುಗಾರಿಕಾ ಇಲಾಖಾಧಿಕಾರಿಗಳು ಇಲಾಖಾ ನಿರ್ದೇಶ ನಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ನಾಪತ್ತೆಯಾಗಿರುವ ಮೀನುಗಾರರ ಮೃತದೇಹ ಪತ್ತೆ ಯಾಗದ ಹಿನ್ನೆಲೆಯಲ್ಲಿ ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಕುಟುಂಬ ಗಳಿಂದ ಕರಾರುಪತ್ರ ಪಡೆದು ಪರಿಹಾರ ಒದಗಿಸಲು ಅವಕಾಶವಿದೆ. ಆ ನಿಟ್ಟಿನಲ್ಲಿ ಮೀನುಗಾರಿಕಾ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.

ಕಳೆದ ಮೂರುವರೆ ವರ್ಷಗಳಲ್ಲಿ ಇದೇ ರೀತಿ ನಾಪತ್ತೆಯಾದ ನಾಲ್ಕೈದು ಕುಟುಂಬಗಳಿಗೆ ಇಲಾಖೆಯಿಂದ ಪರಿಹಾರ ಒದಗಿಸಿಕೊಡಲಾಗಿದೆ. ಕರಾರು ಪತ್ರದಲ್ಲಿ ನಾಪತ್ತೆಯಾದವರು ಮರಳಿ ಜೀವಂತವಾಗಿ ಬಂದರೆ ಪರಿಹಾರದ ಮೊತ್ತವನ್ನು ಸರಕಾರಕ್ಕೆ ವಾಪಾಸ್ಸು ನೀಡಬೇಕೆಂಬುದು ನಮೂದಿ ಸಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸುವರ್ಣ ತ್ರಿಭುಜ ಬೋಟಿನ ಅವಶೇಷ ಪತ್ತೆ ಹಾಗೂ ಆ ಕುಟುಂಬಗಳಿಗೆ ಕರಾರುಪತ್ರದ ಆಧಾರದಲ್ಲಿ ಪರಿಹಾರ ಒದಗಿಸುವಂತೆ ವರದಿಯನ್ನು ಇಲಾಖೆ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ. ಕುಟುಂಬಗಳಿಂದ ಕರಾರುಪತ್ರ ಪಡೆದು ಪರಿಹಾರ ನೀಡಲು ಅವಕಾಶ ಇದೆ. ಪರಿಹಾರ ನೀಡುವ ಬಗ್ಗೆ ಸರಕಾರ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ನಾಪತ್ತೆಯಾದ ಕುಟುಂಬಗಳಿಗೆ ಎಲ್ಲ ರೀತಿಯ ಸಹಕಾರವನ್ನು ಇಲಾಖೆಯಿಂದ ನೀಡಲಾಗುತ್ತದೆ’ ಎಂದು ಇಲಾಖೆ ಉಪನಿರ್ದೇಶಕ ಪಾಶ್ವರ್ನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News