ಹಿದಾಯತ್ ನಗರ ಎಸೆಸ್ಸೆಪ್ ವತಿಯಿಂದ ಇರ್ಷಾದಿಯ್ಯ 2ಕೆ19 ಶಿಬಿರ
ಉಳ್ಳಾಲ, ಮೇ 5: ಸಮುದ್ರದ ಎಲ್ಲಾ ಚಿಪ್ಪಿನಲ್ಲೂ ಮುತ್ತು ಇರುವುದಿಲ್ಲ, ಅದೇ ರೀತಿ ಪ್ರತಿಭೆ ಎಂಬುದೂ ಎಲ್ಲರಲ್ಲೂ ಇರೋದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಶಿಬಿರಗಳ ಮೂಲಕ ಪ್ರತಿಭೆಯನ್ನು ಹೊರಹಾಕಬಹುದು ಎಂದು ಕೆ.ಸಿ.ರೋಡು ಎಸ್‌ವೈಎಸ್ ಅಧ್ಯಕ್ಷ ಎನ್.ಎಸ್.ಉಮರಬ್ಬ ಮಾಸ್ಟರ್ ಅಭಿಪ್ರಾಯಪಟ್ಟರು.
ಎಸೆಸ್ಸೆಫ್ ಹಿದಾಯತ್ ನಗರ ಶಾಖೆಯ ವತಿಯಿಂದ ರವಿವಾರ ಹಿದಾಯತ್ ನಗರ ಮದ್ರಸ ಸಭಾಂಗಣದಲ್ಲಿ ಜರುಗಿದ ಇರ್ಷಾದಿಯ್ಯ 2ಕೆ19 ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಫ್ ಹಿದಾಯತ್ ನಗರ ಶಾಖಾಧ್ಯಕ್ಷ ಶಬೀರ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ವಲಯ ಕೋಶಾಧಿಕಾರಿ ಜಿ.ಎ.ಇಬ್ರಾಹೀಂ, ಹಿದಾಯತ್ ನಗರ ಮಸೀದಿಯ ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಸಖಾಫಿ ಹಾಗೂ ಖತೀಬ್ ಅಹ್ಮದ್ ಕಬೀರ್ ಸಅದಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಅಲ್ ಹಿದಾಯ ಜುಮಾ ಮಸೀದಿಯ ಕಾರ್ಯದರ್ಶಿ ಝಾಕೀರ್ ಹಿದಾಯತ್ ನಗರ, ಮುಅಲ್ಲಿಮರಾದ ಅಶ್ರಫ್ ಅಮ್ಜದಿ, ಅಬ್ದುಲ್ ರಹೀಂ ಝುಹ್ರಿ, ಎಸೆಸ್ಸೆಫ್ ಉಪಾಧ್ಯಕ್ಷ ಝುಬೈರ್ ಝುಹ್ರಿ, ಇಬ್ರಾಹೀಂ ಮುಸ್ಲಿಯಾರ್ ಹಿದಾಯತ್ ನಗರ, ಕೋಟೆಕಾರ್ ಎಸೆಸ್ಸೆಫ್ ಅಧ್ಯಕ್ಷ ಸಿದ್ದೀಕ್ ಕೊಮರಂಗಳ ಉಪಸ್ಥಿತರಿದ್ದರು.
ಎಸೆಸ್ಸೆಫ್ ಜೊತೆ ಕಾರ್ಯದರ್ಶಿ ಲಿಬಾನ್ ಮರ್ಝೂಕಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ವಂದಿಸಿದರು.