ಮಂಗಳೂರು: ಕಟ್ಟಿ ಹಾಕಿದ್ದ ಬೋಟಿನ ಹಗ್ಗ ತುಂಡರಿಸಿದ ದುಷ್ಕರ್ಮಿಗಳು

Update: 2019-05-06 09:55 GMT

ಮಂಗಳೂರು: ಹಳೆ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಕಟ್ಟಿ ಹಾಕಿದ್ದ ಮೀನುಗಾರಿಕಾ ಬೋಟನ್ನು ರಾತ್ರೋರಾತ್ರಿ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟದ್ದು, ಖಾಲಿ ಬೋಟ್ ಕಡಲ ಮಧ್ಯೆ ಬಂಡೆಗೆ ಸಿಲುಕಿ ಮುಳುಗಡೆಯಾಗಿದೆ.

ಮಂಗಳೂರಿನ ಬಜಾಲ್ ನಿವಾಸಿ ಮೌರಿಸ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆಂದು ಸಂಶಯಿಸಿದ್ದಾರೆ. ಬೋಟಿಗೆ ಸಾಕಷ್ಟು ಹಾನಿಯಾಗಿದ್ದು, ಇತರೇ ಬೋಟ್ ಗಳ ಸಹಾಯದಿಂದ ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಿದ್ದರೂ ಕಡಲಿನ‌ ಅಲೆಗಳ ಅಬ್ಬರಕ್ಕೆ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಬೋಟ್ ಮಾಲಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಬೋಟ್ ನ ಹಗ್ಗ ತುಂಡರಿಸಿ ಬಿಟ್ಟ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಬೋಟ್ ಮಾಲಕರು ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News