ಮೂಡುಬಿದಿರೆ: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ

Update: 2019-05-06 14:44 GMT

ಮೂಡುಬಿದಿರೆ : ಪ್ರಸಕ್ತ ಸಾಲಿನ ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯಲ್ಲಿ ಮೂಡುಬಿದಿರೆಯ ಅಲ್-ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯು ಶೇಕಡ 100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳ ಪೈಕಿ 16 ಡಿಸ್ಟಿಂಕ್ಷನ್, 29 ಮಂದಿ ಪ್ರಥಮ ದರ್ಜೆ, 2 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಾದ ಸಿಮ್ರ ಹೆಸ್ದಾನ್‌ 88.4%, ಆನ್ ಫಾಲ್‌ 88%, ಝೈನಬಾ ಹನ 85% ಮತ್ತು ಅಹ್ಮದ್‌ ಫಾಝ 82% ಪಡೆದಿರುತ್ತಾರೆ.

ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ವರ್ಗ ಹಾಗೂ ಪ್ರಾಂಶುಪಾಲೆ ನಝ್ರಾನರನ್ನು ಸಂಸ್ಥೆಯ ಚೆಯರ್ ಮ್ಯಾನ್  ಮೊಯ್ದಿನ್ ಕುಂಞಿ, ನಿರ್ದೇಶಕಿ ಮುಮ್ತಾಝ್  ಹಾಗೂ ಆಡಳಿತ ವರ್ಗ ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News