ತುಮಕೂರಿನ ಅನಾಥಾಶ್ರಮಕ್ಕೆ ಬಟ್ಟೆ ವಿತರಣೆ

Update: 2019-05-06 15:43 GMT

ಉಡುಪಿ, ಮೇ.6: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಹಳೆ ಬಟ್ಟೆಗಳಿಗೆ ಮರುಜೀವ ನೀಡುವ 6ನೇ ಹಂತದ ಕಾರ್ಯಕ್ರಮವು ನಗರದ ಮಾರುತಿ ವಿಥೀಕಾ ಬಳಿಯ ಸಮಿತಿಯ ಕಛೇರಿಯಲ್ಲಿ ಸೋಮವಾರ ನಡೆಯಿತು.

ಸಾರ್ವಜನಿಕರು ಸಮಿತಿಯ ಯೋಜನೆಗೆ ಒಪ್ಪಿಸಿದ ಉತ್ತಮ ಗುಣಮಟ್ಟದ 35 ಮೂಟೆ ಬಟ್ಟೆಗಳನ್ನು ತುಮಕೂರಿನಲ್ಲಿ ಅನಾಥಾಶ್ರಮ ನಡೆಸುತ್ತಿರುವ ಶಾರದಾಂಬ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು. ಬಟ್ಟೆಗಳನ್ನು ಟ್ರಸ್ಟಿನ ಪರವಾಗಿ ತುಮಕೂರಿನ ಮಣಿಕಂಠ, ಆಶಾ ಸ್ವಿಕರಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ಸಂತೋಷ್ ಸರಳಬೆಟ್ಟು, ಪಲ್ಲವಿ ಸಂತೋಷ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News