ಅಂದರ್ ಬಾಹರ್: ಏಳು ಮಂದಿ ಬಂಧನ
Update: 2019-05-06 15:45 GMT
ಉಡುಪಿ, ಮೇ 6: 76 ಬಡಗಬೆಟ್ಟು ಗ್ರಾಮದ ಕಸ್ತೂರ್ಬಾ ನಗರ ಎಂಬಲ್ಲಿ ಮೇ 5ರದು ಸಂಜೇ 7:30ರ ಸುಮಾರಿಗೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗಣೇಶ(27), ಶಿವಾನಂದ ಯಮುನಪ್ಪ ಗೋರಾ ವರ್(28), ಶರಣಪ್ಪ(32), ಶಂಕರಪ್ಪಗ್ಯಾನಪ್ಪ ಸರೂರ್(30), ಲಕ್ಷ್ಮಣ ಚವಣ್ಣ(25), ಕೊಪ್ಪಳ ಜಿಲ್ಲೆಯ ಮಂಜುನಾಥ(23), ಗದಗ ಜಿಲ್ಲೆಯ ಗಣೇಶ ವೇಣಪ್ಪಔಕೋತ್ತಾರ್(24) ಬಂಧಿತ ಆರೋಪಿಗಳು. ಇವರಿಂದ 5,320 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.