ಬೋಟಿನಲ್ಲಿ ಕುಸಿದು ಬಿದ್ದು ಮೃತ್ಯು
Update: 2019-05-06 15:47 GMT
ಮಲ್ಪೆ, ಮೇ 6: ಮಲ್ಪೆ ಬಂದರಿನಲ್ಲಿ ಮೀನುಗಾರರೊಬ್ಬರು ಬೋಟಿನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಮೇ 6ರಂದು ಬೆಳಗಿನ ಜಾವ 5:30ರ ಸುಮಾರಿಗೆ ನಡೆದಿದೆ.
ಮೃತರನ್ನು ವಿಜಯ ಕುಂದರ್ (53) ಎಂದು ಗುರುತಿಸಲಾಗಿದೆ. ಮಲ್ಪೆಯ ತೌಫೀಕ್ ಎಂಬವರ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಮೀನು ಗಾರಿಕೆಗೆ ಹೊರಡಲು ಬೋಟಿನಲ್ಲಿ ಮೀನಿನ ಬಲೆಯನ್ನು ಸರಿಪಡಿಸಿಕೊಳ್ಳುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.